ಗುದ್ನೇಶ್ವರ ಪಂಚಕಳಸ ರಥೋತ್ಸವ ರದ್ದು

Kukanuru Gudneshwara God Chariot
ಕುಕನೂರಿನ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ರಥೋತ್ಸವ ರದ್ದಾದ ಹಿನ್ನಲೆಯಲ್ಲಿ ಸಂಪ್ರದಾಯ ಪಾಲನೆಗಾಗಿ ರಥಕ್ಕೆ ಪಂಚಕಳಸ ಏರಿಸಲಾಗಿದೆ.
Published on

ಕುಕನೂರು: ಪಟ್ಟಣದ ಗುದ್ನೇಶ್ವರಮಠದಲ್ಲಿ ಬುಧವಾರ ಜರುಗಬೇಕಿದ್ದ ಶ್ರೀ ಗುದ್ನೇಶ್ವರಸ್ವಾಮಿಯ(ಶ್ರೀ ರುದ್ರಮುನೀಶ್ವರ) ಪಂಚಕಳಸ ಮಹಾರಥೋತ್ಸವ ಈ ವರ್ಷ ಕರೊನಾ ತಡೆಗೆ ಕಟ್ಟೆಚ್ಚರ ಕ್ರಮದಿಂದಾಗಿ ರದ್ದಾಗಿದೆ.

ರಥಕ್ಕೆ ಸಂಪ್ರದಾಯ ಬಿಡಬಾರದು ಎಂದು ಪಂಚಕಳಸ ಮಾತ್ರ ಜೋಡಿಸಲಾಗಿದೆ. ರಥೋತ್ಸವಕ್ಕೆ ಅಲಕಾಂರ ಇರಲ್ಲ. ರಥೋತ್ಸವ ಒಂದು ಹೆಜ್ಜೆ ಸಹ ಸಾಗುವುದಿಲ್ಲ. ಅರ್ಚಕ ಮಂಡಳಿಯಿಂದ ಸಂಪ್ರದಾಯಕ ಪೂಜೆ ಮಾತ್ರ ಸಲ್ಲುತ್ತದೆ. ದೇವಸ್ಥಾನದಲ್ಲಿ ಆವರಣದಲ್ಲಿ ಯಾವುದೇ ಮಿಠಾಯಿ, ತಿನಿಸು ಅಂಗಡಿ, ಆಟಿಕೆ ಸಾಮಾನು, ಜೋಕಾಲಿ, ಪ್ರಸಾದ ವ್ಯವಸ್ಥೆ ಇನ್ನಿತರೆ ಜಾತ್ರಾ ವೈಭವ ಕಟ್ಟುನಿಟ್ಟಾಗಿ ರದ್ದಾಗಿವೆ.

ದರ್ಶನಕ್ಕೆ ಅವಕಾಶ: ಶ್ರೀ ಗುದ್ನೇಶ್ವರ ಸ್ವಾಮಿಯ ದರ್ಶನ, ಪೂಜೆಗೆ ಅವಕಾಶ ಇರುತ್ತದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಹಾಕಿಕೊಂಡು ಬಂದರೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಕೋವಿಡ್-19 ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ ಪಾಲಿಸಲಾಗುವುದು. ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ವರ್ಷದ ಶ್ರೀ ರುದ್ರಮುನೀಶ್ವರ ರಥೋತ್ಸವ ರದ್ದು ಪಡಿಸಲಾಗಿದೆ. ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಇದ್ದು, ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. | ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್, ಕುಕನೂರು ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net