ಬಾವಿಗೆ ಬಿದ್ದ ಯುವಕನ ಶವ ಪತ್ತೆ

24052020 Kukanoor young Man body find
Published on

ರಾತ್ರಿಯೆಲ್ಲ ಕಾರ್ಯಾಚರಣೆ | ಕುಡಿದ ಅಮಲಿನಲ್ಲಿ ಬಿದ್ದಿದ್ದ

ಕುಕನೂರು: ಬೆಣಕಲ್ಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕುಡಿದ ಅಮಲಿನಲ್ಲಿ ಪುರಾತನ ಬಾವಿಗೆ ಬಿದ್ದಿದ್ದ ಭರಮಪ್ಪ ಜಾಲಿಕುಡಿ (26) ಎಂಬಾತನ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಶನಿವಾರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗು ಕಂದಾಯ ಇಲಾಖೆ ಸೇರಿ ಯುವಕನ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಬಾವಿ ಸುತ್ತ ಗಿಡ, ಕಂಟೆ ಬೆಳೆದಿತ್ತು. 30 ಅಡಿಗಿಂತಲೂ ಅಗಲವಾದ ಬಾವಿ ಇದಾಗಿದ್ದರಿಂದ ಸಂಗ್ರಹವಾಗಿದ್ದ ನೀರನ್ನು ಶನಿವಾರ ತಡರಾತ್ರಿವರೆಗೂ ಹೊರಹಾಕಲಾಯಿತು. ನಂತರ ಕ್ರೇನ್ ಮೂಲಕ ಶವ ಮೇಲೆತ್ತಲಾಯಿತು. ಸಿಪಿಐ ನಾಗರೆಡ್ಡಿ, ಪಿಎಸ್‌ಐ ಎನ್.ವೆಂಕಟೇಶ, ಅಗ್ನಿಶಾಮಕ ಅಧಿಕಾರಿ ಸಂಗಪ್ಪ ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net