

ಕುಕನೂರು: ತಾಲೂಕಿನ ಭಟಪ್ಪನಹಳ್ಳಿಗೆ ಹೆಚ್ಚುವರಿ ಬಸ್ ಸಂಪರ್ಕ ಕಲ್ಪಿಸುವಂತೆ ವಿದ್ಯಾರ್ಥಿಗಳು ಬುಧವಾರ ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ಯರೇಹಂಚಿನಾಳ, ಬಿನ್ನಾಳ, ಚಿಕೇನಕೊಪ್ಪದಿಂದ ಜನರನ್ನು ಹತ್ತಿಸಿಕೊಂಡು ಭಟಪ್ಪನಹಳ್ಳಿಗೆ ಬಸ್ ಬಂದಾಗ ಪ್ರಯಾಣಿಕರಿಂದ ತುಂಬಿರುತ್ತಿದೆ. ಈ ಬಸ್‌ನಲ್ಲಿ ಭಟಪ್ಪನ ಹಳ್ಳಿಯ ವಿದ್ಯಾರ್ಥಿಗಳು ಬಸ್ ಏರಲು ಸ್ಥಳಾವಕಾಶ ಇರುವುದೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಮತ್ತೊಂದು ಹೆಚ್ಚುವರಿ ಬಸ್ ಬಿಡುವವರೆಗೆ ಬಸ್ ಮುಂದಕ್ಕೆ ಬಿಡುವುದಿಲ್ಲ ಎಂದು ಬಸ್‌ಗೆ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಮುಖಂಡರು ಮಧ್ಯೆ ಪ್ರವೇಶಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.