

ಕುಕನೂರು: ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಮನೆಯಿಂದ ಹೊರಗಡೆ ಬಂದು ಅನಾವಶ್ಯವಾಗಿ ಸುತ್ತಾಡುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡುವ ಮೂಲಕ ಮನೆಯಿಂದ ಹೊರ ಬಾರದಂತೆ ಪಿಎಸ್‌ಐ ಎನ್.ವೆಂಕಟೇಶ ಎಚ್ಚರಿಕೆ ನೀಡಿದ್ದಾರೆ. ಕರೊನಾ ಭೀತಿ ಹಿನ್ನಲೆ ಪೊಲೀಸರು ಹೊರ ಬರುವ ಜನರನ್ನು ಮನೆಗೆ ಕಳಿಯುಸುತ್ತಿದ್ದಾರೆ. ಪ್ರಮುಖ ಕಾರಣವಿಲ್ಲದೆ ಸುಮ್ಮನೆ ಹೊರ ಬಂದವರಿಗೆ ಲಾಠಿ ಬೀಸಿ ಬಿಸಿ ಮುಟ್ಟಿಸುತ್ತಿದ್ದಾರೆ. ಪುಂಡರಿಗೆ ಬಸ್ಕಿ ಹೊಡೆಯುವ ಶಿಕ್ಷೆ ಮತ್ತೊಮ್ಮೆ ಮನೆಯಿಂದ ಹೊರಬರುವುದಿಲ್ಲ ಅನ್ನುವವರೆಗೂ ಎಚ್ಚರಿಕೆ ನೀಡಿದ್ದಾರೆ.