ಶಾಸಕ ಹಾಲಪ್ಪ ಆಚಾರ್ ಹೇಳಿಕೆ

05072020 Kukanoor CC Road Work
Published on

ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಯತ್ನ

ಕುಕನೂರು: ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ತಮ್ಮ ಅವಧಿಯಲ್ಲಿ ಕೈಗಿಂಡ ಸಿಸಿ ರಸ್ತೆ ಕಾಮಗಾರಿಗಳನ್ನು ಸಂಪೂರ್ಣ ಪೂರ್ಣಗೊಳಿಸುತ್ತೇನೆ ಎಂದು ಶಾಸಕ ಹಾಲಪ್ಪ ಆಚಾರ್ ಭರವಸೆ ನೀಡಿದರು.

ತಾಲೂಕಿನಲ್ಲಿ ಕೆಬಿಜೆಎನ್‌ಎಲ್ ಅನುಷ್ಠಾನದಲ್ಲಿ ಬಂಡಿಹಾಳ, ತೊಂಡಿಹಾಳ, ಮಂಡಲಗಿರಿ, ತಳಕಲ್ಲ, ತಳಬಾಳ ಹಾಗೂ ಬೆಣಕಲ್ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಕೆಲ ಗ್ರಾಮಗಳಲ್ಲಿ ಇನ್ನೂ ಸಿಸಿ ರಸ್ತೆ ಕಾಮಗಾರಿ ನಡೆದಿಲ್ಲ. ಅಂತಹ ಗ್ರಾಮಗಳನ್ನು ಗುರುತಿಸಿ ಅವಶ್ಯವಿರುವ ಜಾಗದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಮಳೆಗಾಲದಲ್ಲಿ ಜನರಿಗೆ ಸಂಚರಿಸಲು ಅನುಕೂಲವಾಗತ್ತದೆ. ರಾಜ್ಯ ಸರ್ಕಾರದಿಂದ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುತ್ತೇನೆ ಎಂದರು.

ತಾಪಂ ಇಒ ಜಯರಾಂ ಚವ್ಹಾಣ, ಕೃಷ್ಣ ಜಲನಿಗಮದ ಅಧಿಕಾರಿ ನಿಂಗನಗೌಡ ಪೈಲ್, ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಶಂಭು ಜೋಳದ, ಬಸವನಗೌಡ ತೊಂಡಿಹಾಳ, ಮಾರುತಿ ಗಾವರಾಳ, ಪ್ರಕಾಶಗೌಡ ಹೊರಪೇಟೆ, ಹಂಚ್ಯಾಳಪ್ಪ ತಳವಾರ, ಕನಕಪ್ಪ ಬ್ಯಾಡರ್, ಶರಣಬಸವನಗೌಡ ಹೊರಪೇಟೆ, ಮಾರುತಿ ಗೊಲ್ಲರ್, ಈರಮ್ಮ ತಳವಾರ, ಕೆಂಚಪ್ಪ ನಡುವಲಮನಿ, ಪಿಎಸ್‌ಐ ಎನ್ ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net