ಬಿಜೆಪಿಯಿಂದ ಅಪಪ್ರಚಾರ- ಮಾಜಿ ಸಚಿವ ರಾಯರಡ್ಡಿ ಟೀಕೆ

Rajuru Gramaswaraj Campaign
ರಾಜೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿಯನ್ನು ಗ್ರಾಮಸ್ಥರು ಸನ್ಮಾನಿಸಿದರು.
Published on

ಕುಕನೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ ಅಭಿವೃದ್ಧಿ ಆಗಿವೆ ಎಂಬ ತಪ್ಪು ಅಪಪ್ರಚಾರ ಮಾಡಲಾಗುತ್ತಿದೆ. ಈ ಹಿಂದೆ ಯಾವತ್ತೂ, ಯಾವುದೇ ಅಭಿವೃದ್ಧಿ ಆಗಿಲ್ಲವೇ ? ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.

ರಾಜೂರು ಬನ್ನಿಕೊಪ್ಪ, ಇಟಗಿ, ಭಾನಾಪೂರು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಕ್ಕೆ ಸುಣ್ಣ ಬಣ್ಣ ಹಚ್ಚುವ ಕೆಲಸವಾದರೂ ಸಚಿವ ಹಾಲಪ್ಪ ಆಚಾರ್ ಮಾಡಲಿ ನೋಡೋಣ. ಇಡೀ ರಾಜ್ಯದಲ್ಲಿ ಯಲಬುರ್ಗಾ ಕ್ಷೇತ್ರವನ್ನು ಮಾದರಿ ಮಾಡಿದ್ದೇನೆ. ಸಿಸಿ ರೋಡ್ ಮಾಡುವಾಗ ಕಮಿಷನ್ ಆಸೆಗೆ ರಾಯರಡ್ಡಿ ಸಿಸಿ ರೋಡ್ ಮಾಡುತ್ತಾರೆ ಎಂದಿದ್ದರು. ಸದ್ಯಹಾಲಪ್ಪ ಆಚಾರ್ ಅವರೇ ಸಿಸಿ ರೋಡ್ ಕಾಮಗಾರಿ ಮಾಡುತ್ತಿದ್ದು, ಕಲ್ಲು-ಸಿಮೆಂಟನ್ನು ಅವರೇ ಸಪ್ಲೈ ಮಾಡುತ್ತಿದ್ದಾರೆ. ಒಂಥರಾ ಸಿಂಗಲ್ ವಿಂಡೋ ಏಜೆನ್ಸಿ ಹಾಲಪ್ಪ ಆಚಾರ್ ಅವದದು.

ಕುಕನೂರು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಯಲಬುರ್ಗಾ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವಕೀಲರಾದ ರಾಮಣ್ಣ ಸಾಲಬಾವಿ, ಬಿ.ಎಮ್ ಶಿರೂರು, ಪ್ರಮುಖರಾದ ಮಲ್ಲಿಕಾರ್ಜುನ ಬಿನ್ನಾಳ, ದೇವಪ್ಪ ಅರಕೇರಿ, ಮಂಜುನಾಥ ಕಡೆಮನಿ, ಈಶಪ್ಪ ದೊಡ್ಮನಿ, ಬಸವರಾಜ ಮಾಸೂರು, ಸಂಗಮೇಶ ಗುತ್ತಿ,ಫಕೀರಸಾಬ್ ನಧಾಫ್, ವಿರುಪಾಕ್ಷಿ ದೊಡ್ಮನಿ, ಸಂತೋಷ ಬೆಣಕಲ್ಲ, ಬಸವರಾಜ ಕುಡಗುಂಟಿ, ಈರಪ್ಪ ಕರಕುರಿ, ಚಾಂದಾಹುಸೇನಸಾಬ್, ಅರವಿಂದ ಮುಂದಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net