ಹಳೇ ಜಾಗದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಿಸಿ

27072020 Kukanoor Ambedakar Bhavan appeale
Published on

ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಷಿಗೆ ದಲಿತ ಸಮುದಾಯದವರ ಮನವಿ

ಕುಕನೂರು: ಪಟ್ಟಣದ 18ನೇ ವಾರ್ಡ್‌ನ ದತ್ತ ಕಾಲನಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡದೆ 12 ಹಾಗೂ 13 ನೇ ವಾರ್ಡ್‌ನ ಮಧ್ಯದಲ್ಲಿದ್ದ ಹಳೇ ಭವನದ ಜಾಗದಲ್ಲಿಯೇ ನೂತನ ಭವನ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಷಿಗೆ ದಲಿತ ಸಮುದಾಯದವರು ಸೋಮವಾರ ಮನವಿ ಸಲ್ಲಿಸಿದರು.

ಪಪಂನ ಎಸ್‌ಸಿಪಿ ಯೋಜನೆಯನ್ವಯ 1.25 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನವನ್ನು ದತ್ತ ಕಾಲನಿಯಲ್ಲಿ ನಿರ್ಮಾಣ ಮಾಡಬೇಕೆಂದು ಪಪಂ ಸದಸ್ಯರು ಸಭೆಯಲ್ಲಿ ಸೂಚಿಸಿದ್ದರು. ಆದರೆ, ಆ ಕಾಲನಿಯವರು ಕೆಲವು ದಿನಗಳ ಹಿಂದೆ ಶಾಸಕ ಹಾಲಪ್ಪ ಆಚಾರ್‌ಗೆ ದತ್ತ ಕಾಲನಿಯಲ್ಲಿ ಭವನ ಬೇಡವೆಂದು ಮನವಿ ನೀಡಿರುವ ವಿಷಯ ಗಮನಕ್ಕೆ ಬಂದಿದೆ. ಈ ಹಿಂದೆ ಇದ್ದ ಸ್ಥಳದಲ್ಲಿಯೇ ಭವನ ನಿರ್ಮಿಸಿಕೊಡಬೇಕು.

ಎಸ್‌ಸಿಪಿ ಅನುದಾನ ದುರುಪಯೋಗ ಪಡಿಸಿಕೊಂಡು ಬೇರೆ ಕಾಮಗಾರಿಗೆ ಉಪಯೋಗಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಮುದಾಯದ ಮುಖಂಡರಾದ ಶರಣಪ್ಪ ಛಲವಾದಿ, ನಿಂಗಪ್ಪ ಗೊರ್ಲೆಕೊಪ್ಪ, ನಿಂಗಪ್ಪ ಘಾಟಿ, ಫಕೀರಪ್ಪ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ರಾಘು ಮಾಳೆಕೊಪ್ಪ, ಶಿವಶಂಕರ ಭಂಡಾರಿ, ಚಂದ್ರು ಆರಬೆರಳಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net