ಡಿ.7ರಂದು ಕುಡುಪು ಕ್ಷೇತ್ರದಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ

kudupu-sree-anantha-padmanabha-temple-mangalore-tourism-entry-fee-timings-holidays-reviews-header
Published on


ಮಂಗಳೂರು : ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿ.7ರಂದು ಮಧ್ಯಾಹ್ನ 1ಕ್ಕೆ ಷಷ್ಠಿಯ ಬ್ರಹ್ಮ ರಥೋತ್ಸವ
ನಡೆಯಲಿದೆ.
ಡಿ.2 ರಂದು ಬೆಳಗ್ಗೆ ಪ್ರಾರ್ಥನೆಯೊಂದಿಗೆ ಕೊಪ್ಪರಿಗೆ ಮುಹೂರ್ತ, ಮಧ್ಯಾಹ್ನ ಮಹಾಪೂಜೆ , ರಾತ್ರಿ ಮಯೂರ ವಾಹನೋತ್ಸವ,
3ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ವೃಷಭ ವಾಹನೋತ್ಸವ, 4 ರಂದು ರಾತ್ರಿ ವಿಶೇಷವಾದ ಸರ್ಪ ವಾಹನೋತ್ಸವ, 5ರಂದು ಬೆಳಗ್ಗೆ ಗಣಹೋಮ, ರಾತ್ರಿ ಕಟ್ಟೆ ಪೂಜೆಗಳು, ಗಜವಾಹನೋತ್ಸವ, 6 ರಂದು ಪಂಚಮಿ , ಬೆಳಗ್ಗೆ ಅಂಗಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಕಟ್ಟೆಪೂಜೆಗಳು, ಗರುಡ ವಾಹನೋತ್ಸವ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ 7 ರಂದು ಷಷ್ಠಿ, ಬೆಳಿಗ್ಗೆ ರಥ ಕಲಶ, ಮಧ್ಯಾಹ್ನ 1ಕ್ಕೆ ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ ಹಾಗೂ 8ರಂದು ಬೆಳಗ್ಗೆ 7ಕ್ಕೆ ಅತೀ ವಿಶಿಷ್ಟವಾದ ಜೋಡು ದೇವರ ಬಲಿ ಉತ್ಸವ, ಚಂದ್ರ ಮಂಡಲ ಉತ್ಸವ, ಪಾಲಕಿ ಉತ್ಸವ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net