ಕುಡುಪು ಭಟ್ರ ಕಲ್ಲುರ್ಟಿ ವಾರ್ಷಿಕ ಕೋಲ ಬಲಿ ಸೇವೆ ಭಕ್ತಿ ಪರವಶರಾದ ಸಹಸ್ರಾರು ಭಕ್ತರು

mng--31 march kudupu kallurti
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ಪುಣ್ಯ ಕ್ಷೇತ್ರ ಕುಡುಪು ಭಟ್ರಕಲ್ಲುರ್ಟಿ ಎಂದು ಪ್ರಸಿದ್ಧಿ ಪಡೆದ ಶ್ರೀ ಕಲ್ಲುರ್ಟಿ, ಶ್ರೀ ಕಾಳಮ್ಮ, ಶ್ರೀ ಕಲ್ಕುಡ ಹಾಗೂ ಗುಳಿಗ ಪಂಜುರ್ಲಿ ದೈವಸ್ಥಾನದಲ್ಲಿ ಶನಿವಾರ ನಡೆದ ವಾರ್ಷಿಕ ಕೋಲ ಬಲಿ ಸೇವೆಯು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರಗಿತು.


ದೈವಸ್ಥಾನದಲ್ಲಿ ದೈವಗಳಿಗೆ ಶುದ್ದಿ ಕಲಶ ಪ್ರಕ್ರಿಯೆಗಳು ಹಾಗೂ ವಾಸ್ತು ಬಲಿ ವಾಸ್ತು ಹೋಮ ನಡೆದ ಬಳಿಕ ಮುಂಜಾನೆ ಪ್ರಾರ್ಥನೆ ಹಾಗೂ ಗಣ ಹೋಮದೊಂದಿಗೆ ವಾರ್ಷಿಕ ಕೋಲ ಬಲಿ ಸೇವೆ ಪ್ರಾರಂಭಗೊಂಡಿತು. ಸಂಜೆ ಆರು ಗಂಟೆಗೆ ದೈವ ನರ್ತಕರಿಗೆ ಅತ್ಯಂತ ಅಪರೂಪದ ಎಣ್ಣೆ ಭೊಳ್ಯ ಸೇವೆ ಜರಗಿ ವಿಶೇಷವಾದ ಮಹಾಪೂಜೆ ಜರಗಿತು. ಸಂಜೆ 7ಗಂಟೆಗೆ ವಾರ್ಷಿಕ ಕೋಲ ಬಲಿ ಸೇವೆಯ ವಿಶೇಷವಾದ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.


ರಾತ್ರಿ 9.30 ಗಂಟೆಗೆ ಶ್ರೀ ಕಲ್ಲುರ್ಟಿ, ಶ್ರೀ ಕಾಳಮ್ಮ, ಶ್ರೀ ಕಲ್ಕುಡ ದೈವದೇವರ ವೈಭವದ ಗಗ್ಗರ ಸೇವೆಯು ದೇವಸ್ಥಾನದ ಮೇಲಿನ ಭಾಗದ ಅಂಗಣದಲ್ಲಿ ಜರಗಿ, ಆ ಬಳಿಕ ದೈವಗಳು ವಿಶೇಷ ಕರ್ಪೂರ ಸೇವೆಯೊಂದಿಗೆ ನರ್ತನದೊಂದಿಗೆ ದೈವಸ್ಥಾನದ ಕೆಳಗಿನ ಅಂಗಣಕ್ಕೆ ಆಗಮಿಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನರ್ತನ ಸೇವೆ ಜರಗಿತು. ಆ ಬಳಿಕ ದೈವದ ಪಾತ್ರಿಗಳಿಂದ ದರ್ಶನ ಸೇವೆ ನಡೆದುನಂತರ ಶ್ರೀ ಗುಳಿಗ ಪಂಜುರ್ಲಿ ದೈವಗಳ ಗಗ್ಗರ ಹಾಗೂ ಕೋಲ ಬಲಿ ಸೇವೆ ಜರಗಿತು.


ಶ್ರೀ ಕಲ್ಲುರ್ಟಿ, ಶ್ರೀ ಕಾಳಮ್ಮ ಹಾಗೂ ಶ್ರೀ ಕಲ್ಕುಡ ಪರಿವಾರ ದೈವ ದೇವರನ್ನು ಭಕ್ತರಿಂದ ಅರ್ಪಣೆಗೊಂಡ ಒಂದು ಸಹಸ್ರಕ್ಕೂ ಮಿಕ್ಕಿದ ಮಲ್ಲಿಗೆ ಹೂವಿನ ಚೆಂಡುಗಳಿಂದ ಅಲಂಕರಿಸಲಾಗಿತ್ತು.


ಕೀರ್ತಿ ಶೇಷ ಕುಡುಪು ಅನಂತ ಭಟ್ ರವರ ಮಕ್ಕಳಾದ ಮನೋಹರ ಭಟ್ ಕುಡುಪು, ಪ್ರಭಾಕರ ಭಟ್ ಕುಡುಪು, ಕರುಣಾಕರ ಭಟ್ ಹಾಗೂ ಶಶಿಂದ್ರ ಭಟ್ ಕುಡುಪು, ಅರ್ಚಕರಾದ ವೇದಮೂರ್ತಿ ಬಾಲಕೃಷ್ಣ ಭಟ್,ಭಟ್ರ ಕಲ್ಲುರ್ಟಿ ಸೇವಾ ಸಮಿತಿ ಹಾಗೂ ಕುಡುಪು ಹತ್ತು ಸಮಸ್ತರ ಪ್ರಮುಖರಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಮುಕ್ತೇಸರರಾದ ಭಾಸ್ಕರ ಕೆ, ಚಂದ್ರಹಾಸ ಕುಡುಪು, ವಸಂತ ಅಮೀನ್ ಕುಡುಪು, ಜನಾರ್ದನ ಕುಡುಪು, ನಾಗೇಶ್ ಬೈತುರ್ಲಿ , ಕುಮಾರ ಕುಡುಪು , ಉದಯಕುಮಾರ್ ಕುಡುಪು, ಸುದರ್ಶನ್ ಕುಡುಪು, ಸುಜನ್ ದಾಸ್ ಕುಡುಪು, ಅರುಣ್ ಮಂಗಳ ನಗರ, ಸಾಮ್ರಾಟ್ ಫ್ರೆಂಡ್ ಸರ್ಕಲ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರಾಕೇಶ್ ಕುಡುಪು, ಪ್ರವೀಣ್ ಕುಮಾರ್ ಕುಡುಪು, ರಾಘವೇಂದ್ರ ಭಟ್ ಕುಡುಪು, ಮಿತ್ರ ಮಂಡಳಿ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ರೋಹಿತಾಶ್ವ ಕುಡುಪು, ನವೀನ್ ಕುಮಾರ್ ಕುಡುಪು, ರವೀಂದ್ರ ದುರ್ಗದ ಗುಡ್ಡೆ ಭರತೇಶ ಕುಡುಪು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net