ಕುಡುಒಕ್ಕಲಿಗರ ಯುವ ಸಮಾವೇಶ ಇಂದಿನಿಂದ

Published on

ನರೇಗಲ್ಲ: ಶ್ರೀ ತ್ಯಾಗರಾಜ ಮಹಾದಾನಿ ಶಿರಸಂಗಿ ಲಿಂಗರಾಜ ದೇಸಾಯಿಯವರ 164ನೇ ಜಯಂತ್ಯುತ್ಸವ ಮತ್ತು ಕುಡುಒಕ್ಕಲಿಗರ ಯುವ ಸಮಾವೇಶ ಜ.10, 11ರಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. 10ರಂದು ಬೆಳಗ್ಗೆ 10ಗಂಟೆಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಜರುಗಲಿದೆ. ಡಾ. ಅವಿನಾಶ ಓದುಗೌಡ್ರ, ಡಾ. ಅಜಯ ಕುರಹಟ್ಟಿ, ಡಾ. ಕಾಂತೇಶ ಚವಡಿ ಭಾಗವಹಿಸಲಿದ್ದಾರೆ. 11ರಂದು ಬೆಳಗ್ಗೆ 9ಗಂಟೆಗೆ ಸಿದ್ಧರಾಮೇಶ್ವರ, ಶಿರಸಂಗಿ ಲಿಂಗರಾಜ ದೇಸಾಯಿಯವರ ಭಾವಚಿತ್ರಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಸಂಜೆ 4.30ಕ್ಕೆ ತ್ಯಾಗರಾಜ ಮಹಾದಾನಿ ಶಿರಸಂಗಿ ಲಿಂಗರಾಜ ದೇಸಾಯಿಯವರ 164ನೇ ಜಯಂತ್ಯುತ್ಸವ ಮತ್ತು ಕುಡುಒಕ್ಕಲಿಗರ ಯುವ ಸಮಾವೇಶದ ಸಾನ್ನಿಧ್ಯವನ್ನು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಶಾಸಕ ಬಾಬಾಸಾಹೇಬ ಪಾಟೀಲ, ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ ಗುಳಗಣ್ಣವರ, ಶಿವಕುಮಾರಗೌಡ ಪಾಟೀಲ, ಸಿದ್ರಾಮಪ್ಪ ಗೊಜನೂರ ಆಗಮಿಸಲಿದ್ದಾರೆ. ಪ್ರೊ. ಎಂ.ಜಿ. ಗಚ್ಚನ್ನವರ ಉಪನ್ಯಾಸ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net