

ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಪ್ರಮುಖವಾಗಿ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಬೀದಿ ನಾಯಿಗಳು ಶಾಲಾ ವಿದ್ಯಾರ್ಥಿಗಳಿಗೆ, ಮತ್ತು ಪುಟ್ಟ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆಗಳ ಬಗ್ಗೆ ಚರ್ಚೆಯಾದ ಹಿನ್ನೆಲೆಯಲ್ಲಿ ಮತ್ತು ಬೀದಿ ನಾಯಿಗಳ ನಿಯಂತ್ರಣ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಸಂಬAಧಿಸಿದ ಚರ್ಚೆಗಳು ನಡೆದವು.
ಗ್ರಾಮ ಪಂಚಾಯತಿ ನಿಧಿ ಹಣಕಾಸು ಯೋಜನಾ ಅಡಿಯಲ್ಲಿ ಈಗಾಗಲೇ ಕ್ರಿಯಾ ಯೋಜನೆ ಕೈಗೊಂಡಿರುವ ಕಾಮಗಾರಿಗಳನ್ನು ತಕ್ಷಣವೇ ಆರಂಭ ಮಾಡುವ ಬಗ್ಗೆ ಚರ್ಚೆಗಳು ನಡೆದವು. ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಸರ್ವೆ ಸದಸ್ಯರ ಸಹಕಾರದೊಂದಿಗೆ ನಡೆಸುವ ಬಗ್ಗೆ ಮತ್ತು ಬೀದಿ ದೀಪಗಳ ಆಳವಡಿಕೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತಾನಾಡಿ ಸದಸ್ಯರ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಆದ್ಯತೆಯ ಅನುಗುಣವಾಗಿ ಎಲ್ಲಾ ವಾರ್ಡ್ ಕಾಮಗಾರಿ ಮತ್ತು ಶುಚಿತ್ವಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ವಹಿಸಲಾಗುವುದು.
ಈಗಾಗಲೇ ಕುಡಿಯುವ ನೀರಿನ ಸರಬರಾಜು ಮಾಡುವ ಬಗ್ಗೆ ಚರ್ಚೆಯಾದ ವಿಷಯಗಳನ್ನು ಸರ್ಕಾರದ ನಿಯಮಾನುಸಾರ ಅದರ ಅನುಗುಣವಾಗಿ ಅನುಸರಿಸಲಾಗುವುದು. ಜತೆಯಲ್ಲಿ ಗ್ರಾಮ ನಿಧಿ ಅನುದಾನವನ್ನು ಕ್ರಮಬದ್ಧವಾಗಿ ವಿನಿಯೋಗಿಸಿ ಕಾಮಗಾರಿಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸರ್ಕಾರದ ಹೊಸ ಯೋಜನೆ, ಮತ್ತು ಗ್ರಾಮ ಪಂಚಾಯತಿ ಸಂಬAಧಿಸಿದ ವಿಷಯಗಳನ್ನು ಸವಿಸ್ತಾರವಾಗಿ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ, ಅಭಿವೃದ್ಧಿ ಸಂತೋಷ್ ಹಾಗೂ ಸದಸ್ಯರು ಇದ್ದರು.