ಕುದುಕುಳಿ ಗುರು ಯುವ ಮಂಡಳಿ ವಾರ್ಷಿಕ ಮಹಾಸಭೆ

31mdk04
Published on

ಭಾಗಮಂಡಲ:

ಇಲ್ಲಿನ ತಾವೂರು ಗ್ರಾಮದ ಕುದುಕುಳಿ ಗುರು ಯುವ ಮಂಡಳಿಯ ೧೩ನೇ ವಾರ್ಷಿಕ ಮಹಾಸಭೆ ಕುದುಕುಳಿ ಐನ್ ಮನೆ ಆವರಣದಲ್ಲಿ ಮಂಗಳವಾರ ನಡೆಯಿತು.

ಗುರು ಯುವ ಮಂಡಳಿ ಅಧ್ಯಕ್ಷ ಕಿಶೋರ್ ಕೆ. ಬಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಜೆ. ಮೋಹನ್, ಖಜಾಂಚಿ ಲವಿನ್, ಪ್ರಮುಖರಾದ ಕೆ.ಪಿ. ಪುಟ್ಟಪ್ಪ, ಸೇವಂತಿ ಚಂದ್ರಶೇಖರ್, ಇಂದಿರೇಶ ಇದ್ದರು. ಗುರು ಯುವ ಮಂಡಳಿಯ ಸದಸ್ಯರಿಗೆ ಕಥೆ ಹೇಳುವ ಸ್ಪರ್ಧೆ, ಹಾಡುಗಾರಿಕೆ, ಕೇರಂ ಆಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ದ್ವಿತೀಯ ಪಿಯುಸಿ ಮತ್ತು ೧೦ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಗುರು ಯುವ ಮಂಡಳಿಯ ಸದಸ್ಯರಿಗೆ ಇದೇ ವೇಳೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net