ಕುದ್ರು ಸಿನಿಮಾ ಇಂದು ತೆರೆಗೆ

udp-kudru
Published on

ಉಡುಪಿ: ಮೋಕ್ಷ ಕ್ರಿಯೇಷನ್ಸ್​ ಬ್ಯಾನರ್​ನಲ್ಲಿ ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ "ಕುದ್ರು" ಚಿತ್ರ ಅಕ್ಟೋಬರ್​ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ದೆಶಕ ಭಾಸ್ಕರ್​ ನಾಯ್ಕ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುದ್ರು ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್​ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್​ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್​ ರಿಗ್​ ನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು.

ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಹುಡುಗನಾಗಿ ನಟ ಫರ್ಹಾನ್​, ಬ್ರಾಹ್ಮಣ ಹುಡುಗನಾಗಿ ನಾಯಕ ಹರ್ಷಿತ್​ ಶೆಟ್ಟಿ, ಕ್ರಿಶ್ಚಿಯನ್​ ಹುಡುಗನಾಗಿ ಗಾಡ್ವಿನ್​ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ ಅಭಿನಯಿಸಿದ್ದಾರೆ. ಮಂಗಳೂರಿನ ನಮಿತಾ, ಪ್ರವಿಣ್​ ಬಂಗೇರ, ಕಾಂತಾರ ಸತೀಶ್​ ಆಚಾರ್ಯ ನಟಿಸಿದ್ದಾರೆ.
ಛಾಯಾಗ್ರಹಣ ಪುರಾಣಿಕ್​, ಪ್ರದಿಪ್​, ಸಂಗೀತ ನಿರ್ದೇಶನ ಪ್ರಜ್ವಲ್​, ಪ್ರತಿಕ್​ ಕುಂದು ಹಾಗೂ ಶ್ರೀನಿವಾಸ್​ ಕಲಾಲ್​ ಅವರ ಸಂಕಲನವಿರುವ "ಕುದ್ರು" ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್​ ಸಂಭಾಷಣೆ ಬರೆದಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾ ಹೆಗ್ಡೆ, ಸತೀಶ್​ ಆಚಾರ್ಯ, ಫರ್ಹಾನ್​, ನಮಿತಾ, ಡಯಾನಾ ಡಿಸೋಜ, ಪ್ರವಿಣ್​ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net