ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಸಂಪನ್ನ

mng--9 april Bagavathi
Published on

ಮಂಗಳೂರು: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಶುಕ್ರವಾರದಿಂದ ಆರಂಭವಾಗಿದ್ದ ನಡಾವಳಿ ಉತ್ಸವವು ಭಾನುವಾರ ಸಂಭ್ರಮದ ಸಂಪನ್ನ ಕಂಡಿತು.


ಶನಿವಾರ ರಾತ್ರಿ 9ರ ಬಳಿಕ ಶ್ರದ್ಧಾಭಕ್ತಿಯ ಭೇಟಿಕಳ ಸಂಪನ್ನಗೊಂಡಿತು. ಆ ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶವಾಗಿ ವೀರಸ್ತಂಭ ದರ್ಶನವಾಯಿತು. ಮಧ್ಯರಾತ್ರಿ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ ನಡೆದು ಮುಂಜಾನೆ ಭಕ್ತಿ ಸಂಭ್ರಮದ ಕೆಂಡಸೇವೆ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಭಾಗವಹಿಸಿದರು.


ಭಾನುವಾರ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಮಹಾಪೂಜೆ, ರಾತ್ರಿ ಕೆಂಡಸೇವೆ ಹಾಗೂ ಮೂರ್ತಿದರ್ಶನ ನಡೆದು ಭಂಡಾರ ಅವರೋಹಣ ನೆರವೇರಿತು. ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net