ದಸರಾ ಯಶಸ್ವಿಗೊಳಿಸಿದ ಸಚಿವರಿಗೆ ಸನ್ಮಾನ

30
Published on

ಮೈಸೂರು: ಈ ಬಾರಿಯ ದಸರಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಚಾಮುಂಡೇಶ್ವರಿ ಬಳಗದಿಂದ ಅಭಿನಂದಿಸಲಾಯಿತು.

ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಮಾತನಾಡಿ, ಮೈಸೂರು ದಸರಾ ಯಶಸ್ವಿಯಾಗಿ ನೆರವೇರಲು ಜಿಲ್ಲಾ ಸಚಿವ ಡಾ. ಮಹದೇವಪ್ಪ ಅವರು ಕಾರಣ. ತಮ್ಮ ಅನುಭವದೊಂದಿಗೆ ಅಧಿಕಾರಿಗಳನ್ನು ಪ್ರೋತ್ಸಾಹಿಸಿ ಕಾರ್ಯಕ್ರಮಗಳು ಅಚ್ಚ್ಚುಕಟ್ಟಾಗಿ ನಡೆಯುವಂತೆ ಮಾಡಿದರು ಎಂದರು.

ಅಂಬಾರಿ ಹೊತ್ತ ಅಭಿಮನ್ಯು ತಂಡದ ಮಾವುತ, ಕಾವಾಡಿಗಳ ಬಗ್ಗೆ ಸಚಿವರು ವಿಶೇಷ ಕಾಳಜಿ ವಹಿಸಿದ್ದರು. ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿತು. ಲಕ್ಷಾಂತರ ಪ್ರವಾಸಿಗರಿಗೆ ಪೊಲೀಸ್ ಇಲಾಖೆ ಮೂಲಕ ಸುರಕ್ಷತೆ, ಭದ್ರತೆ ಕಲ್ಪಿಸಿದರು. ಪೌರಕಾರ್ಮಿಕರು ಸ್ವಚ್ಛತಾ ಅಭಿಯಾನ ನಡೆಸಿದರು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖಂಡರಾದ ವರುಣ ಮಹಾದೇವ, ಕಡಕೊಳ ಶಿವು, ಶಫಿ, ಬನ್ನೂರು ಸ್ವಾಮಿ, ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net