ಕುದ್ಮುಲ್ ರಂಗರಾವ್ ತತ್ವಾದರ್ಶ ಕಾಂಗ್ರೆಸ್ ಪಕ್ಷಕ್ಕೆ ಮಾದರಿ
ಕುದ್ಮುಲ್ ರಂಗರಾವ್ ಜಯಂತಿ ಕಾರ್ಯಕ್ರಮದಲ್ಲಿ ಆರ್. ಧರ್ಮಸೇನ್ ಮಾತನಾಡಿದರು. ಕೆ.ಹರೀಶ್ ಕುಮಾರ್, ಬಿ.ರಮಾನಾಥ ರೈ, ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ ಮೊದಲಾದವರಿದ್ದರು.
Published on:
Copied
Follow Us
ಮಂಗಳೂರು: ತಳ ಸಮುದಾಯಕ್ಕೆ ಸಮಾಜದ ಸನ್ಮಾರ್ಗವನ್ನು ತೋರಿಸಿದ ಕುದ್ಮುಲ್ ರಂಗರಾವ್ ಅವರ ತತ್ವಾದರ್ಶದಲ್ಲೇ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್ ಹೇಳಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ)ದ ವತಿಯಿಂದ ಮಹಾನ್ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಜಯಂತಿ ಹಾಗೂ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಮಾತನಾಡಿ, ಈ ಕಾರ್ಯಕ್ರಮವು ಕೇವಲ ಜಯಂತಿ ಆಚರಣೆಯಾಗಿರದೆ, ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮಾಜದ ಸಬಲೀಕರಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಜನಪರ ಅಭಿಯಾನವಾಗಿದೆ. ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮುಖಂಡರಾದ ಜಿ. ಕೃಷ್ಣಪ್ಪ, ಬಸವರಾಜ್, ಡಾ.ನಾಯಕ್ ರೂಪ್ ಸಿಂಗ್, ಕಾಣಿರಂ ರಾಠೋಡ್, ರಂಗನಾಥ್ ಪ್ರಸಾದ್, ಸಂತೋಷ್, ಸಾರಿಕಾ ಪೂಜಾರಿ, ನಾಗವೇಣಿ, ವಿಜಯಲಕ್ಷ್ಮೀ, ಸುಭಾಸ್ ಕೊಲ್ನಾಡ್, ಸೋಹನ್ ಆಳ್ವ ಮೊದಲಾದವರಿದ್ದರು.
ದ ಕ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮ್ ಬಲ್ಲಾಳ್ ಭಾಗ್ ಸ್ವಾಗತಿಸಿದರು. ಗೌತಮ್ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.