

ಮಂಗಳೂರು : ದಲಿತೋದ್ಧಾರಕ್ಕಾಗಿ ಶ್ರಮಿಸಿದ ಹಲವಾರು ಮಹನೀಯರ ನಡುವೆ ದಲಿತೋದ್ಧಾರಕ್ಕಾಗಿ ಬದುಕನ್ನೇ ಸಮರ್ಪಿಸಿದವರು ಕುದ್ಮುಲ್ ರಂಗರಾವ್. ಅವರ ಜೀವನದ ಆದರ್ಶ ಸಮಾಜಕ್ಕೆ ದಾರಿ ದೀಪ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ 165ನೇ ಜನ್ಮದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಪುಷ್ಪಾರ್ಚನೆ ಸಹಿತ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುದ್ಮುಲ್ ರಂಗರಾವ್ ಅವರನ್ನು ನೆನೆಯುವುದೇ ನಮ್ಮ ಪಾಲಿನ ಸೌಭಾಗ್ಯ ಎಂದರು.
ಲೇಖಕ ಯಶವಂತ್ ಕುದ್ರೋಳಿ ಮಾತನಾಡಿ ಕುದ್ಮುಲ್ ರಂಗರಾವ್ ಅವರ ಹೆಸರು ಜಗತ್ತಿನ ಮಹಾನ್ ಸಮಾಜ ಸುಧಾರಕರ ಸಾಲಿನಲ್ಲಿರಬೇಕಿತ್ತು. ಆದರೆ ನಾವು ಅವರ ಕೊಡುಗೆಯನ್ನು ರಾಜ್ಯ ಮಟ್ಟಕ್ಕೂ ತಲುಪಿಸಲು ಮರೆತಿರುವುದು ಬೇಸರದ ಸಂಗತಿ ಎಂದರು.
ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು , ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಲಲ್ಲೇಶ್, ರಮೇಶ್ ಹೆಗ್ಡೆ,
ಭರತ್ ಸೂಟರ್‌ಪೇಟೆ ಉಪಸ್ಥಿತರಿದ್ದರು. ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ ವಂದಿಸಿದರು.