

ಕುಶಾಲನಗರ:
ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಆದರ್ಶ ವ್ಯಕ್ತಿತ್ವ ಮತ್ತು ರಾಷ್ಟಪ್ರೇಮ ಬೆಳೆಸಿಕೊಳ್ಳಲು ದೇಶದ ಐಕ್ಯತೆ, ಸಮಗ್ರತೆಗೆ ಪಣ ತೊಡಬೇಕು ಎಂದು 2004ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಾಡ್ ಆಫ್ ಆನರ್‌ನಲ್ಲಿ ಕರ್ನಾಟಕ - ಗೋವಾ ಎನ್.ಸಿ.ಸಿ. ವತಿಯಿಂದ ಪಾಲ್ಗೊಂಡಿದ್ದ ಕುಶಾಲನಗರ ಜೆ.ಸಿ.ಐ.ಕಾವೇರಿ ಸಂಸ್ಥೆಯ ಅಧ್ಯಕ್ಷರೂ ಆದ ತಂಬAಡ ತೇಜ ದಿನೇಶ್ ಹೇಳಿದರು. ಕುಶಾಲನಗರ ತಾಲೂಕು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ 76 ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ, ಸ್ವಾಭಿಮಾನಿ, ಗೌರವಯುತ ಜೀವನ ನಡೆಸಬೇಕು ಎಂದು ನಮ್ಮ ದೇಶದ ಅನೇಕ ಮಹನೀಯರು ಕಂಡಿದ್ದ ಕನಸನ್ನು ನನಸು ಮಾಡಲು ನಮ್ಮ ದೇಶದ ಸಂವಿಧಾನ ಸಹಕಾರಿಯಾಗಿದೆ. ಇಂದು ಗಣರಾಜ್ಯವಾಗಿ 76 ಅದ್ಭುತ ವರ್ಷಗಳನ್ನು ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ಪ್ರಜಾಪ್ರಭುತ್ವ, ಘನತೆ ,ರಾಷ್ಟ್ರಪ್ರೇಮ ಮತ್ತು ಏಕತೆಯಲ್ಲಿ ನಮ್ಮ ಪ್ರಯಾಣ ಮತ್ತು ಸಾಧನೆ ಬೇರೂರಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಜ.26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನ. ಸ್ವಾತಂತ್ರ‍್ಯ ದಿನಾಚರಣೆಯನ್ನು ಎಷ್ಟು ಸಂಭ್ರಮ, ದೇಶಭಕ್ತಿಗಳಿಂದ ಆಚರಿಸುತ್ತೇವೆಯೋ ಅಷ್ಟೇ ಸಂಭ್ರಮದಿAದ ಗಣರಾಜ್ಯೋತ್ಸವವನ್ನೂ ಆಚರಿಸುತ್ತೇವೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಕೆ. ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಕೆ.ವಿ. ಅರುಣ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎಂ.ಜೆ. ರಜನಿಕಾಂತ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಎ.ಎಂ. ಜವರಯ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದಪ್ರಕಾಶ್, ಶಿಕ್ಷಕರಾದ ಬಿ.ಡಿ. ರಮ್ಯ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ. ಸೌಮ್ಯ, ಸಿಬ್ಬಂದಿ ಎಂ.ಉಷಾ, ಶಾಲಾ ನಾಯಕ ಎಂ.ಗೌತಮ್, ಉಪ ನಾಯಕಿ ಸ್ಪಂದನ, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು. ಇದಕ್ಕೂ ಮೊದಲು ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ. ಸೌಮ್ಯ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ದೈಹಿಕ ಕಸರತ್ತು, ವ್ಯಾಯಾಮ ಪ್ರದರ್ಶನ ಹಾಗೂ ರಾಷ್ಟ್ರದ ಸಾರ್ವಭೌಮತ್ವ ಪ್ರತಿಬಿಂಬಿಸುವ ಪಿರಾಮಿಡ್ ಗಮನ ಸೆಳೆಯಿತು.