ಯುವಕರು ಜ್ಞಾನದ ಕಡೆ ಮುಖ ಮಾಡಲಿ- ಜೀನಿಯಸ್ ಅಕಾಡೆಮಿ ನಿರ್ದೇಶಕ ಸಲಹೆ

Badeladaku Competation Exam
ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದಲ್ಲಿ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮವನ್ನು ಧಾರವಾಡದ ಜೀನಿಯಸ್ ಅಕಾಡೆಮಿ ನಿರ್ದೇಶಕ ಸಿದ್ದಣ್ಣ ದಳವಾಯಿ ಉದ್ಘಾಟಿಸಿದರು.
Published on

ಕೂಡ್ಲಿಗಿ: ಯುವಕರು ರಾಜಕೀಯದ ಲಾಲಸೆ ಬಿಟ್ಟು ಜ್ಞಾನದ ಕಡೆಗೆ ಮುಖ ಮಾಡಲಿ ಎಂದು ಧಾರವಾಡದ ಜೀನಿಯಸ್ ಅಕಾಡೆಮಿ ನಿರ್ದೇಶಕ ಸಿದ್ದಣ್ಣ ದಳವಾಯಿ ಹೇಳಿದರು.

ತಾಲೂಕಿನ ಬಡೇಲಡಕು ಗ್ರಾಮದಲ್ಲಿ ಭಾನುವಾರ ದಿ. ಎಂ. ನಿಂಗಪ್ಪ ಮತ್ತು ದಿ.ಎಂ.ಬಸವೇಶ್ವರಪ್ಪರ ಸ್ಮರಣಾರ್ಥ ಬಿಸಿಲೂರ ನಾಡಿನಲಿ ಅಕ್ಷರ ಜಾತ್ರೆ ಶೀರ್ಷಿಕೆಯಡಿ ನಿರುದ್ಯೋಗಿ ಯುವಕರಿಗೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಪನ್ಯಾಸಕ ನಾಗರಾಜ್ ಕೊಟ್ರಪ್ಪ ಮಾತನಾಡಿ, ಗ್ರಾಮೀಣ ಭಾಗದ ಯುವಕ,ಯುವತಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು. ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಯ ಸೇರಿ ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ನಿವೃತ್ತ ಪ್ರಾಚಾರ್ಯ ಡಾ.ಮಾನಕರಿ ಶ್ರೀನಿವಾಸ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆಯ ಆಯೋಜಕರಾದ ಯುವಕ ಎಂ.ಮಂಜುನಾಥ, ಕೂಡ್ಲಿಗಿ ಜೂನಿಯರ್ ಕಾಲೇಜು ಉಪನ್ಯಾಸಕ ವೆಂಕಟೇಶ್, ಸಾಹಿತಿ ಕೆ.ಶ್ರೀಧರ್, ಮುಖಂಡರಾದ ಪ್ರಶಾಂತನಾಯ್ಕ, ರಾಮಚಂದ್ರಪ್ಪ, ಕುರಿಸಿದ್ದಪ್ಪ, ಮೂಗಣ್ಣ, ಹೊನ್ನೂರು ಗೌಡರು, ನರಸಿಂಹಪ್ಪ, ಬಡಗಿ ಚಂದ್ರಪ್ಪ, ಬೋವಿ ಈರಪ್ಪ, ದೊಡ್ಡ ಬೊಮ್ಮಪ್ಪ, ಬಸಣ್ಣ, ಶಿಕ್ಷಕ ಶಿವು ನಾಯಕ ದೊರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net