ರೇಬಿಸ್ ಕಾಯಿಲೆ ನಿರ್ಲಕ್ಷಿಸದಿರಿ

Kudligi rabis day
ಕೂಡ್ಲಿಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮವನ್ನು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಪಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ, ಐಸಿಟಿಸಿ ಆಪ್ತ ಸಮಾಲೋಚಕರಾದ ಕೆ.ಪ್ರಶಾಂತ ಕುಮಾರ್, ನಾಗರತ್ನಾ ಇತರರಿದ್ದರು.
Published on

ಕೂಡ್ಲಿಗಿ: ರೇಬಿಸ್ ಮಾರಣಾಂತಿಕ ಕಾಯಿಲೆ ಯಾಗಿದ್ದು, ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಡೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಕುಮಾರ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೇಬಿಸ್ ರೋಗವು ನಾಯಿ, ನರಿ, ತೋಳ, ಕರಡಿ, ಬೆಕ್ಕು ಕಡಿತದಿಂದ ಹರಡುತ್ತದೆ. ಈ ಪ್ರಾಣಿಗಳಿಂದ ಕಚ್ಚಿಸಿಕೊಂಡ ವ್ಯಕ್ತಿ ತಕ್ಷಣ ಆ ಗಾಯವನ್ನು ಸ್ವಚ್ಛ ನೀರಿನಿಂದ 15 ನಿಮಿಷ ತೊಳೆಯಬೇಕು. ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ಅಲಕ್ಷೃ ಮಾಡಬಾರದು. ಈ ವೈರಸ್ ಮನುಷ್ಯನ ನರವ್ಯೆಹಕ್ಕೆ ಸೇರಿ ದೇಹದ ಮಿದಳು, ಹೃದಯಕ್ಕೆ ಹಾನಿ ಮಾಡುತ್ತದೆ. ಜೀವ ಹೋಗುವ ಸಂಭವವಿರುತ್ತದೆ ಎಂದರು.

ಪಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ, ಸ್ತ್ರೀರೋಗ ತಜ್ಞ ನಾಗರಾಜ, ಐಸಿಟಿಸಿ ಆಪ್ತ ಸಮಾಲೋಚಕರಾದ ಕೆ.ಪ್ರಶಾಂತ ಕುಮಾರ್, ನಾಗರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net