ವಾಲ್ಮೀಕಿ ಜಾತ್ರೋತ್ಸವ ಸಮಿತಿಗೆ ಆಯ್ಕೆ

Kudlgi Valmiki Jatre
ಮಂಜು ಮಯೂರ
Published on

ಕೂಡ್ಲಿಗಿ: ರಾಜನಹಳ್ಳಿಯಲ್ಲಿ ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೋತ್ಸವ ನಡೆಯಲಿದ್ದು, ಜಾತ್ರಾ ಸಮಿತಿಯ ಕೂಡ್ಲಿಗಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳ ನೇತೃತ್ವ ಮತ್ತು ವಾಲ್ಮೀಕಿ ಮುಖಂಡರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತಾನಾಡಿ, ಈ ಬಾರಿ ಜಾತ್ರೆಯಲ್ಲಿ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಹೀಗಾಗಿ ತಾಲೂಕುವಾರು ಜಾತ್ರಾ ಸಮಿತಿ ರಚಿಸಲಾಗುತ್ತಿದೆ ಎಂದರು. ಸಮಿತಿಗೆ ಯುವ ಮುಖಂಡ ಮಂಜು ಮಯೂರ (ಅಧ್ಯಕ್ಷ) ಹಾಗೂ ಸದಸ್ಯರಾಗಿ ವೀರಣ್ಣ, ಸಿರಿಬಿ ಮಂಜುನಾಥ, ರಾಘವೇಂದ್ರ, ಸತೀಶ್, ಅಂಜಿ ಬೈಯ್ಯ, ಅಜೇಯ್, ರಮೇಶ್, ಭರತ್, ಮಾಳ್ಗಿ ರಾಘು ಇತರರು ಆಯ್ಕೆಯಾದರು.

ವಾಲ್ಮೀಕಿ ತಾಲೂಕು ಮಹಾಸಭಾ ಅಧ್ಯಕ್ಷ ಎಸ್. ಸುರೇಶ್, ಕಾವಲಿ ಶಿವಪ್ಪ ನಾಯಕ, ಬಿ.ವೆಂಕಟೇಶ್, ಜಿಂಕಲ್ ನಾಗಮಣಿ, ಪಿ. ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net