ಊರಮ್ಮ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ

29072022 kudligi temple construction
Published on

ಧನ ಸಹಾಯ ಮಾಡಿ ರಶೀದಿ ಪಡೆಯಲು ಆಯಾಗಾರರ ಪ್ರಮುಖ ಕೆ.ಎಚ್.ವೀರನಗೌಡ ಹೇಳಿಕೆ

ಕೂಡ್ಲಿಗಿ: ಪಟ್ಟಣದ ಗ್ರಾಮದೇವತೆ ಊರಮ್ಮ ದೇವಿಯ ನೂತನ ದೇವಸ್ಥಾನವನ್ನು ಎಲ್ಲ ಭಕ್ತರ ಆಸೆಯಂತೆ ಭವ್ಯವಾಗಿ ನಿರ್ಮಾಣ ಮಾಡಲಾಗುವುದು ಎಂದು ಪಟ್ಟಣದ ಆಯಾಗಾರರ ಪ್ರಮುಖ ಕೆ.ಎಚ್.ವೀರನಗೌಡ ಹೇಳಿದರು.

ನೂತನ ಗುಡಿ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಒಂದು ಕೋಟಿ ರೂ. ಸಂಗ್ರಹಿಸಿದ್ದೇವೆ. ನೂತನ ದೇವಸ್ಥಾನದ ಅಂದಾಜು ಎರಡು ಕೋಟಿ ರೂ.ಗೂ ಅಧಿಕವಾಗಿದೆ. ಆದರೆ, ಈಗಾಗಲೇ ಪಟ್ಟಣದ ಅನೇಕ ವ್ಯಾಪಾರಸ್ಥರು ಭವ್ಯವಾದ ಗುಡಿ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ತಗಲುವ ವೆಚ್ಚ ಸಂಗ್ರಹಿಸಲು ಪ್ರತಿ ಮನೆಗೂ ದೈವದವರು ತೆರಳಲಿದ್ದಾರೆ. ದೇಣಿಗೆ ಸಲ್ಲಿಸುವ ಭಕ್ತರು ನೀಡಿದ ಹಣಕ್ಕೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಶ್ರಾವಣ ಶುಕ್ರವಾರ ದೇವಿ ಗುಡಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ, ಮಣ್ಣು ಪರೀಕ್ಷೆಗೆ ಕಳುಹಿಸಿ ನಂತರ ಅಡಿಪಾಯ ಹಾಕಲಾಗುವುದು ಎಂದರು.

ಆಯಾಗಾರರ ಪ್ರಮುಖರಾದ ಹಿ.ಮ.ಚಿದಾನಂದಸ್ವಾಮಿ ಪೂಜೆ ಕಾರ್ಯ ನೆರವೇರಿಸಿದರು. ಟಿ.ಜಿ.ಮಲ್ಲಿಕಾರ್ಜುನ ಗೌಡ, ನಾಗಮಣಿ ಜಿಂಕಾಲ್, ಸಣ್ಣ ಕೊತ್ಲಪ್ಪ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಸುರೇಶ್, ಕೆ.ಈಶಪ್ಪ,ಬಾಣದ ಮೂರ್ತಿ, ಬಾಣದ ಶಂಕರ, ರಾಮಾಂಜನಿ, ಗುಜ್ಜಲ ಗಣೇಶ, ಗ್ಯಾಸ್ ವೆಂಕಟೇಶ, ತುಪ್ಪಳ್ಳಿ ಕೊಟ್ರೇಶ್, ತಳವಾರ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net