ಕೂಡ್ಲಿಗಿ ಪಟ್ಟಣ ಪಂಚಾಯಿತಿಗೆ ಬಿಜೆಪಿಯ ರೇಣುಕಾ ಉಪಾಧ್ಯಕ್ಷೆ

25112022 kudligi pattana pachayat election
Published on

ಕೂಡ್ಲಿಗಿ, ಪಟ್ಟಣದ ಪಪಂ ಚುನಾವಣೆ, ರೇಣುಕಾ ದುರುಗೇಶ್ ಆಯ್ಕೆ,

ಶುಕ್ರವಾರ ನಡೆದ ಚುನಾವಣೆಯಲ್ಲಿ 14ನೇ ವಾರ್ಡ್‌ನ ಸದಸ್ಯೆ ರೇಣುಕಾ ದುರುಗೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಟಿ.ಜಗದೀಶ್ ಇವರ ಆಯ್ಕೆಯನ್ನು ಘೋಷಿಸಿದರು.

ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ, ಜೆಡಿಎಸ್ ಪಕ್ಷಗಳ ಮೈತ್ರಿ ಒಪ್ಪಂದದಂತೆ ಈ ಹಿಂದೆ ಜೆಡಿಎಸ್ ನ ಸರಸ್ವತಿ ರಾಘವೇಂದ್ರ ನ. 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಯ್ಕೆ ಪ್ರಕ್ರಿಯೆ ಸಂದರ್ಭ ಬಿಜೆಪಿಯ 20 ಹಾಗೂ ಜೆಡಿಎಸ್ ನ 12 ಸದಸ್ಯರು ಭಾಗಿಯಾಗಿದ್ದರು. ಉಳಿದಂತೆ ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು.ಪಪಂ ಅಧ್ಯಕ್ಷೆ ಶಾರದಾಬಾಯಿ, ಮುಖ್ಯಾಧಿಕಾರಿ ಫಿರೋಜ್ ಖಾನ್ ಇದ್ದರು.

ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷ: ಪಪಂ ಉಪಾಧ್ಯಕ್ಷೆ ಸ್ಥಾನಕ್ಕೆ ರೇಣುಕಾ ದುರುಗೇಶ್ ಆಯ್ಕೆ ಬಳಿಕ ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ 19ನೇ ವಾರ್ಡ್ ಪೂರ್ಯಾ ನಾಯ್ಕರನ್ನು ಆಯ್ಕೆ ಮಾಡಲಾಯಿತು. ನಂತರ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದರು. ಶಾಸಕ ಎನ್.ವೈ.ಗೋಪಾಲಕೃಷ್ಣ, ನೂತನ ಉಪಾಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪಾರದರ್ಶಕ ಆಡಳಿತ ನೀಡಲು ಸಲಹೆ ನೀಡಿದರು.

ಮುಖಂಡರಾದ ಕೆ.ಚ್.ವೀರನಗೌಡ, ಕೆ.ಎಂ.ತಿಪ್ಪೇಸ್ವಾಮಿ, ಎಸ್.ಪಿ.ಪ್ರಕಾಶ್, ಬಿ.ಭೀಮೇಶ್, ಪಿ.ಚಂದ್ರು, ಮಾಜಿ ಜಿಪಂ ಸದಸ್ಯ ಹೊಂಬಾಳೆ ರೇವಣ್ಣ,ಎಸ್.ದುರುಗೇಶ್, ಪಿ.ಮಂಜುನಾಥ ನಾಯಕ, ಗುನ್ನಳ್ಳಿ ನಾರಾಯಣಿ, ಬಿ.ಕೆ.ರಾಘವೇಂದ್ರ, ಸಿರಬಿ ಮಂಜುನಾಥ, ಕೆ.ಈಶಪ್ಪ, ತಳಾಸ್ ವೆಂಕಟೇಶ್, ಸಚಿನ್‌ಕುಮಾರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net