

ಕೂಡ್ಲಿಗಿ: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಏರ್ಪಟ್ಟ ಹೊಂದಾಣಿಕೆ ಫಲವಾಗಿ ಸ್ಥಳೀಯ ತಾಪಂ ಅಧ್ಯಕ್ಷ ಸ್ಥಾನ ಬಿಜೆಪಿ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ತಾಪಂ ಕಚೇರಿಯಲ್ಲಿ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಎಸ್ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಆಲೂರು ಕ್ಷೇತ್ರದ ನಾಗರತ್ನಮ್ಮ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹಾಕರಭಾವಿ ಕ್ಷೇತ್ರದ ರತ್ನಮ್ಮ ಲಿಂಗನಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮ ಪತ್ರ ಪರಿಶೀಲಿಸಿದ ಹೊಸಪೇಟೆಯ ಎಸಿ ಶೇಕ್ ತನ್ವೀರ್ ಆಸೀಫ್ ಅವಿರೋಧ ಆಯ್ಕೆ ಘೋಷಿಸಿದರು. ಒಟ್ಟು 20 ಸದಸ್ಯರಲ್ಲಿ ಬಿಜೆಪಿಯ 9, ಕಾಂಗ್ರೆಸ್‌ನ 9 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಹಾಜರಿದ್ದರು. ಜರಿಮಲೆ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶ್ರುತಿ ಗೈರಾಗಿದ್ದರು. ತಾಪಂ ಇಒ ಜಿ.ಎಂ.ಬಸಣ್ಣ, ಸಿಬ್ಬಂದಿ ಇದ್ದರು.