ರಂಗಕಲಾವಿದೆ ಶಿವಕುಮಾರಿಗೆ ಸುಭದ್ರಮ್ಮ ಪ್ರಶಸ್ತಿ

290822 Kudligi Nadoja Mansoor Subhadramma Award presentation
ಕೂಡ್ಲಿಗಿಯ ಹಿರಿಯ ರಂಗ ಕಲಾವಿದೆ ಬಿ.ಶಿವಕುಮಾರಿಗೆ ಭಾನುವಾರ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‌ನಿಂದ 2022ನೇ ಸಾಲಿನ ‘ನಾಡೋಜ ಮನ್ಸೂರ್ ಸುಭದ್ರಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಕೂಡ್ಲಿಗಿ: ಪಟ್ಟಣದ ಹಿರಿಯ ರಂಗ ಕಲಾವಿದೆ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಬಿ.ಶಿವಕುಮಾರಿಗೆ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‌ನಿಂದ ಭಾನುವಾರ 2022ನೇ ಸಾಲಿನ ‘ನಾಡೋಜ ಮನ್ಸೂರ್ ಸುಭದ್ರಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿ.ಶಿವಕುಮಾರಿ ಬಾಲ್ಯದಿಂದಲೂ ನಾಟಕಗಳಲ್ಲಿ ಅಭಿನಯಿಸಿ ರಾಜ್ಯದ ಉದ್ದಗಲಕ್ಕೂ ಪ್ರಯಾಣ ಮಾಡಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ ಪಕ್ಕದ ಆಂಧ್ರ ಪ್ರದೇಶಕ್ಕೂ ತೆರಳಿ ರಂಗಕಲೆ ಪ್ರದರ್ಶಿಸಿದ್ದರು. ರಕ್ತರಾತ್ರಿ ನಾಟಕದ ಉತ್ತರೆ, ದ್ರೌಪದಿ ಪಾತ್ರಗಳು ಇವರಿಗೆ ಹೆಸರನ್ನು ತಂದು ಕೊಟ್ಟಿವೆ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸುತ್ತ ಬಂದಿರುವ ಇವರು, ಹಿರಿ-ಕಿರುತರೆ, ಆಕಾಶವಾಣಿಯಲ್ಲೂ ಕಲಾ ಪ್ರದರ್ಶನ ನೀಡಿದ್ದಾರೆ. 38 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಇವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುವರ್ಣ ಕರ್ನಾಟಕ ಮಹಿಳಾ ರತ್ನ, ನಂದಿ ಸೇರಿ ವಿವಿಧ ಪ್ರಶಸ್ತಿಗಳು ಇವರ ಮುಡಿಗೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net