ಸಮಾಜಮುಖಿ ಕಾರ್ಯದಲ್ಲಿ ಆಟೋಚಾಲಕರು: ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಬಣ್ಣನೆ

091122 Kudligi Actor Shankarnag Birthday
ಕೂಡ್ಲಿಗಿಯಲ್ಲಿ ಆಟೋಚಾಲಕರ ನಟ ಶಂಕರ್‌ನಾಗ್ ಹುಟ್ಟುಹಬ್ಬವನ್ನು ಆಚರಿಸಿದರು.
Published on

ಕೂಡ್ಲಿಗಿ: ಆಟೋ ಚಾಲಕರಿಗೂ ಉಜ್ವಲ ಭವಿಷ್ಯವಿದೆ ಎಂದು ಬೆಳ್ಳಿತೆರೆಯ ಮೂಲಕ ಪರಿಚಯಿಸಿದವರು ದಿ.ಶಂಕರ್‌ನಾಗ್ ಎಂದು ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಹೇಳಿದರು.

ಪಟ್ಟಣದ ಮದಕರಿ ವೃತ್ತದ ಬಳಿ ಆಟೋ ನಿಲ್ದಾಣದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ತಾಲೂಕು ಘಟಕದ ನಟ ಶಂಕರ್‌ನಾಗ್ ಹುಟ್ಟುಹಬ್ಬ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ಆಟೋ ಚಾಲಕರು ಸಮಾಜದಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಗರ್ಭಿಣಿ, ವೃದ್ದರು ಹಾಗೂ ಅಶಕ್ತರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಪಘಾತ ಹಾಗೂ ಇತರೆ ತುರ್ತು ಸಂದರ್ಭ ಇವರು ಮುಂಚೂಣಿಯಲ್ಲಿರುತ್ತಾರೆ. ರಕ್ತದ ಅವಶ್ಯಕತೆ ಇದ್ದಾಗ ಸಾರ್ವಜನಿಕರಿಗೆ ಮೊದಲು ನೆನಪಾಗುವುದು ಆಟೋ ಚಾಲಕರು. ಇಂತಹ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡು, ತಮ್ಮ ಕುಟುಂಬದ ಜವಾಬ್ದಾರಿಯನ್ನೂ ಸರ್ಮಥವಾಗಿ ಎದುರಿಸುವ ಕರುಣಾಮಯಿಗಳು ಆಟೋಚಾಲಕರು ಎಂದು ಹೇಳಿದರು.

ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಮಯೂರ ಮಂಜುನಾಥ ಮಾತನಾಡಿ, ನಾವೆಲ್ಲರೂ ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕು. ಯಾರೇ ಗ್ರಾಹಕರು ಬಂದರು ಮೊದಲು ಸೌಜನ್ಯದಿಂದ ಅವರನ್ನು ಹೇಳಿದ ಸ್ಥಳಕ್ಕೆ ತಲುಪಿಸಬೇಕು ಇದು ನಮ್ಮ ವೃತ್ತಿಯ ಜತೆಗೆ ಜವಾಬ್ದಾರಿಯೂ ಹೌದು. ನಾವು ಉತ್ತಮರಾಗಿ ಶಂಕರ್‌ನಾಗ್ ಹೆಸರನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿದರು. ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ಸ್(ರಿ) ತಾಲೂಕು ಸಮಿತಿ ಗೌರವಾಧ್ಯಕ್ಷ, ಶಿವಮೂರ್ತಿ, ಉಪಾಧ್ಯಕ್ಷರಾದ ಇಸ್ಮಾಯಿಲ್, ಗಜ ನಾಗರಾಜ, ಯು. ನಾಗರಾಜ, ಪ್ರಶಾಂತ್, ಜಿಂಕಲ್ ನಾಗೇಶ್, ಬಿ. ಬಸವರಾಜ, ಕೆ.ಬಿ. ಅಂಜನಪ್ಪ, ಗಲ್ಲೆ ನಾಯಕ್, ದಾದು, ಮಲ್ಲಿಕಾರ್ಜುನ, ಆಬಿದ್, ಶಫಿ, ಸುಭಾಷ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net