ಸಂತ ಸೇವಾಲಾಲರ 283ನೇ ಜಯಂತಿ

150222 Kudligi Santa Sevalal Jayanti
ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಮಂಗಳವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.
Published on

ಕೂಡ್ಲಿಗಿ: ರಾಮಾಯಣ, ಮಹಾಭಾರತ ಕಾವ್ಯಗಳಂತೆ ಸಂತ ಸೇವಾಲಾಲ್ ಕೂಡ ಉತ್ತಮ ಸಂದೇಶಗಳನ್ನು ನಾಡಿಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಟಿ.ಜಗದೀಶ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಸೇವಾಲಾಲರ 283ನೇ ಜಯಂತಿ ಕಾರ್ಯಕ್ರಮದಲ್ಲಿ ಸಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾನಾಡಿದರು. ಪೂಜೆ, ವ್ರತಾಚರಣೆ ಮಾಡದೇ ಕಾಯಕದಲ್ಲಿ ಮಾತ್ರ ಫಲವನ್ನು ಕಾಣಲು ಸಾಧ್ಯ ಎಂದು ತಿಳಿಸಿದ ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ನಾವುಗಳು ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಬಂಜಾರ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಎಂ.ವಿ.ಪ್ರಕಾಶ, ಉಪಾಧ್ಯಕ್ಷ ರಾಮಸ್ವಾಮಿ, ಕಾರ್ಯದರ್ಶಿ ಟಿ.ವೆಂಕಟೇಶ ನಾಯ್ಕ, ಖಜಾಂಚಿ ಮಂಜೇಶ ನಾಯ್ಕ, ಪಪಂ ಸದಸ್ಯ ಬಾಸುನಾಯ್ಕ, ಮಹಿಳಾ ಸಂಯೋಜಕಿ ಎಲ್.ಪವಿತ್ರಾ, ಪ್ರಮುಖರಾದ ರಾಮುನಾಯ್ಕ, ವೆಂಕಟೇಶ ನಾಯ್ಕ, ವಿನಯ, ದಿನೇಶ ನಾಯ್ಕೆ, ಪ್ರಕಾಶ ನಾಯ್ಕೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net