ಯೋಜನೆ ಮಹತ್ವ ಅರಿತು ಕೆಲಸ ಮಾಡಿ

Kudligi drinking water project
ಶಿವಪುರ ಹತ್ತಿರದ ಪಾವಗಡ ಕುಡಿವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿದ ಜಿಪಂ ಸಿಇಒ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ ಅವರಿಗೆ ತಾಂತ್ರಿಕ ಅಧಿಕಾರಿ ಕೋಟೇಶ್ವರ ರಾವ್ ಮಾಹಿತಿ ನೀಡಿದರು.
Published on

ಕೂಡ್ಲಿಗಿ: ಜಿಪಂ ಸಿಇಒ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ ಅವರು ಗುರುವಾರ ಶಿವಪುರ ಹತ್ತಿರದ ಪಾವಗಡ ಕುಡಿವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನೀರಿನ ಶುದ್ಧೀಕರಣ ಘಟಕಗಳಲ್ಲಿ ಕ್ಯಾಸ್ಕೇಡ್ ಏರೇಟರ್, ಸ್ಟಿಲ್ಲಿಂಗ್ ಬೇಸಿನ್, ಫ್ಲಾಶ್ ಮಿಕ್ಸರ್ಸ್, ಕೆಮಿಕಲ್ ಹೌಸ್, ಕ್ಲೋರಿನ್ ಹೌಸ್, ಫಿಲ್ಟರ್ ಹೌಸ್ ಸೇರಿದಂತೆ ವಿವಿಧ ಉಪ ಘಟಕಗಳನ್ನು ವೀಕ್ಷಿಸಿದರು. ತಾಂತ್ರಿಕ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಕೂಡ್ಲಿಗಿ ತಾಲೂಕಿನ 215, ಹೊಸಪೇಟೆ ತಾಲೂಕಿನ 15 ಹಾಗೂ ಚಿತ್ರದುರ್ಗ ಜಿಲ್ಲೆಯ 908 ಗ್ರಾಮಗಳು ಸೇರಿದಂತೆ 1138 ಜನವಸತಿ ಪ್ರದೇಶಗಳಿಗೆ ನೀರು ಶುದ್ಧೀಕರಿಸಿ ಪೂರೈಸುವ ಯೋಜನೆ ಇದಾಗಿದೆ. ಅಧಿಕಾರಿಗಳು ಘಟಕದ ಮಹತ್ವ ಅರಿತು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಘಟಕದ ವ್ಯವಸ್ಥಾಪಕ ಕೋಟೇಶ್ವರರಾವ್ ಮಾತನಾಡಿ, ಕೆಲ ಭಾಗಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಶೀಘ್ರ ಪರಿಹಾರವಾಗಲಿವೆ ಎಂದು ಸಿಇಒಗೆ ತಿಳಿಸಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ದೀಪಾ, ಜೆಇಗಳಾದ ನರೇಶ್, ಶ್ರೀನಿವಾಸ ರಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net