ಆಹಾರ ಅರಸಿ ಬಂದ ಕರಡಿಗೆ ವಾಹನ ಡಿಕ್ಕಿ: ಸ್ಥಳದಲ್ಲೇ ಸಾವಿಗೀಡಾದ ಜಾಂಬವಂತ

2109 Ammanakere Cross Bear Death
21ಕೂಡ್ಲಿಗಿ1: ಕೂಡ್ಲಿಗಿ ತಾಲೂಕು ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ಬೆಳಿಗ್ಗೆ ಅಪರಿಚಿತ ವಾಹನ ಡಿಕ್ಕಿಯಿಂದ ಮೃತಪಟ್ಟಿರುವ ಕರಡಿ.
Published on

ಕೂಡ್ಲಿಗಿ: ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ವಾಹನ ಡಿಕ್ಕಿ ಹೊಡೆದು ಕರಡಿ ಸತ್ತಿದೆ. 10 ವರ್ಷದ ಕರಡಿ ಸೋಮವಾರ ರಾತ್ರಿ ಆಹಾರ ಅರಸಿ ಹೊಲಗಳಲ್ಲಿ ಓಡಾಡಿ ನಂತರ ಮರಳಿ ಹೋಗಲು ಹೆದ್ದಾರಿ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕರಡಿ ಕಳೇಬರವನ್ನು ವಲಯ ಅರಣ್ಯ ಕಚೇರಿಗೆ ಸ್ಥಳಾಂತರಿಸಿದರು. ಆ.21ರಂದು ಪಟ್ಟಣದ ಹೊರ ವಲಯದಲ್ಲಿ ಕರಡಿಯೊಂದು ಅಪಘಾತದಲ್ಲಿ ಸತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net