ಸಂಸ್ಕಾರ ಜತೆ ಮೌಲ್ಯಯುತ ಶಿಕ್ಷಣ ಅವಶ್ಯ

Kudligi BED
ಕೂಡ್ಲಿಗಿಯಲ್ಲಿ ಸೋಮವಾರ ಬಿಇಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಜ್ಞಾನಭಾರತಿ ಶಿಕ್ಷಣ ಸಮೂಹದ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಉದ್ಘಾಟಿಸಿದರು.
Published on

ಕೂಡ್ಲಿಗಿ: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯ ಶಿಕ್ಷಣದ ಅವಶ್ಯ ಇದೆ ಎಂದು ಜ್ಞ್ಞಾನಭಾರತಿ ಶಿಕ್ಷಣ ಸಮೂಹದ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಜ್ಞ್ಞಾನಭಾರತಿ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಬಿಇಡಿ ಪ್ರಥಮ ವಷರ್ದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಗುರುಕುಲ ಪಾಠಶಾಲೆಯಲ್ಲಿ ಶಿಕ್ಷಣ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿತ್ತು. ಇದರಿಂದ ಸಮಾಜದಲ್ಲಿ ಪ್ರಾಮಾಣಿಕತೆ, ನ್ಯಾಯ, ಮೌಲ್ಯಗಳು ಕಾಣುತ್ತಿದೇವೆ ಎಂದರು.

ಮರಿಯಮ್ಮನಹಳ್ಳಿ ಪ್ರಿಯದರ್ಶಿನಿ ಕಾಲೇಜು ಪ್ರಾಚಾರ್ಯ ಅಶೋಕ್ ಮಠದ್, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಜ್ಞಾನಭಾರತಿ ವಿದ್ಯಾಲಯದ ಆಡಳಿತಾಧಿಕಾರಿ ರಾಜು ಮಾತನಾಡಿದರು. ಬಿಇಡಿ ದ್ವಿತೀಯ ಹಾಗೂ ಪ್ರಥಮ ವಷರ್ದ ಪ್ರಶಿಕ್ಷಣಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಬಿಇಡಿ ಕಾಲೇಜು ಪ್ರಾಚಾರ್ಯ ಎನ್.ಬಸವರಾಜ, ಉಪನ್ಯಾಸಕರಾದ ಅಜೇಯ್, ಕೊಟ್ರೇಶ್, ಅರ್ಚನಾ, ಫಾರ್ಮಸಿ ಕಾಲೇಜು ಪ್ರಾಚಾರ್ಯೆ ಸುವರ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net