3.5 ಕೋಟಿ ರೂ. ವೆಚ್ಚದಲ್ಲಿ ಠಾಣೆ-ಡಿವೈಎಸ್ಪಿ ಕಚೇರಿ- ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

051222 Kudligi Handing over of police vehicles
ಗುಡೇಕೋಟೆ ಹಾಗೂ ಹೊಸಹಳ್ಳಿ ಪೊಲೀಸ್ ಠಾಣೆಗಳಿಗೆ ನೂತನ ವಾಹನಗಳನ್ನು ಸೋಮವಾರ ಶಾಸಕ ಎನ್.ವೈ.ಗೋಪಾಲಕೃಷ್ಣ ಹಸ್ತಾಂತರ ಮಾಡಿದರು.
Published on

ಕೂಡ್ಲಿಗಿ: ಮೂರುವರೆ ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಪೊಲೀಸ್ ಠಾಣೆ ಹಾಗೂ ಡಿವೈಎಸ್ಪಿ ಕಚೇರಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಾಸಕರ ನಿಧಿಯಿಂದ ಹೊಸಹಳ್ಳಿ ಹಾಗೂ ಗುಡೇಕೋಟೆ ಠಾಣೆಗಳಿಗೆ ಪೊಲೀಸ್ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಐವತ್ತು ವರ್ಷಗಳ ಹಳೆಯದಾದ ಪೊಲೀಸ್ ಠಾಣೆಯು ಮಳೆಯಿಂದಾಗಿ ಸೋರಿ ಶಿಥಿಲಾವಸ್ಥೆ ತಲುಪಿದೆ. ಇದರ ಮರು ನಿರ್ಮಾಣಕ್ಕೆ ಅಂದಾಜು ಮೂರುವರೆ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಯನ್ನು ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗುವುದು ಎಂದರು.

ಸುಮಾರು ವರ್ಷಗಳ ಹಳೆಯದಾದ ವಾಹನಗಳು ಗುಡೇಕೋಟೆ ಹಾಗೂ ಹೊಸಹಳ್ಳಿ ಠಾಣೆಗಳಲ್ಲಿರುವುದು ಗಮನಿಸಿದ್ದು, ಶಾಸಕರ ಅನುದಾನಲ್ಲಿಯೇ ನೂತನ ವಾಹನಗಳಿಗೆ ಅನುದಾನ ನೀಡಿ ಅವರಿಗೆ ಹಸ್ತಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ರಕ್ಷಕರಿಗೆ ಸೌಕರ್ಯಗಳನ್ನು ಕಲ್ಪಿಸಲಾಗುವುದು. ರೈತರ ಬಹುದಿನಗಳ ಬೇಡಿಕೆಯಂತೆ ಎಪಿಎಂಸಿ ಮಾರುಕಟ್ಟೆ ಹಾಗೂ ತಾಲೂಕಿನ ರೈತರ ಸಹಕಾರಿ ಬ್ಯಾಂಕನ್ನು ಮಂಜೂರು ಮಾಡಿಸಿದ್ದು, ಶೀಘ್ರವೇ ಸಹಕಾರಿ ಬ್ಯಾಂಕ್ ಕಚೇರಿಯನ್ನೂ ಉದ್ಘಾಟಿಸಲಾಗುವುದು ಎಂದರು.

ತಹಸೀಲ್ದಾರ್ ಟಿ.ಜಗದೀಶ್, ಡಿವೈಎಸ್ಪಿ ಜಿ.ಹರೀಶ್, ಮುಖಂಡರಾದ ಕೆ.ಎಚ್.ವೀರನಗೌಡ, ಕೆ.ಎಂ.ತಿಪ್ಪೇಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಸೂರ್ಯಪಾಪಣ್ಣ, ಬಿ.ಭೀಮೇಶ್, ಎಸ್.ಪಿ.ಪ್ರಕಾಶ್,ಎಸ್.ದುರುಗೇಶ್, ಪಪಂ ಸದಸ್ಯ ಪಿ.ಚಂದ್ರು,ಪಿ.ಮಂಜುನಾಥ ನಾಯಕ,ಟೋಪಿ ಸುರೇಶ್, ಪಾಪನಾಯಕ, ನಾರಾಯಣಿ, ಎನ್.ಅಜೇಯ್, ಸಣ್ಣ ಬಾಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net