ಕೇಕ್ ಕತ್ತರಿಸಿ ಸಡಗರ

KUDLIGI3
ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕೂಡ್ಲಿಗಿಯಲ್ಲಿ ಮೌನಾಚರಣೆ ನಡೆಸಲಾಯಿತು. ದಲಿತ ಸಂಘರ್ಷ ಸಮಿತಿ ಪ್ರಮುಖ ಎಸ್.ದುರುಗೇಶ್, ಮಂಗಳಮುಖಿ ಸ್ನೇಹ, ಅಜಯ್ ಕುಮಾರ್, ಸೊಲ್ಲೇಶ್, ಚಾರೇಶ್, ಮಂಜುನಾಥ, ಪರಶುರಾಮ, ಚೇತನ, ಶಿಕ್ಷಕ ಅಂಜಿನಪ್ಪ, ಗೊಳ್ಳೆ ನಾಗರಾಜ ಇತರರಿದ್ದರು.
Published on

ಕೂಡ್ಲಿಗಿ: ಆರ್‌ಸಿಬಿ ಜಯಭೇರಿ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ವಿಜಯೋತ್ಸವ ಆಚರಿಸಲಾಯಿತು. ಗಲ್ಲಿ-ಗಲ್ಲಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಟ್ಟಣದ ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೆಳಗಿನ ಜಾವದವರೆಗೂ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಬುಧವಾರ ಸಂಜೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಯುವಕರು ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಊಟ ಹಾಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net