ಗುರಿ ಸಾಧನೆಗೆ ಸಹಕಾರ ಇರಲಿ

ಕೂಡ್ಲಿಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಮಟ್ಟದ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಸಂತೋಷ, ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ, ವಿಕಾಸ ಸಮನ್ವಯಾಧಿಕಾರಿ ರೇಖಾ ನೀರಲಕೇರಿ, ರೇಣುಕಾ ಇತರರಿದ್ದರು.

Published on

ಕೂಡ್ಲಿಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು ಹಾಗೂ ಸಿಬ್ಬಂದಿ ಯೋಜನೆಯ ನಿಯಮಾನುಸಾರ ಸಂಘದ ಸದಸ್ಯರೊಂದಿಗೆ ಉತ್ತಮ ಒಡನಾಟ ಹೊಂದಿ ಕಾರ್ಯಪ್ರವೃತ್ತರಾದಾಗ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣಲು ಸಾಧ್ಯ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಂಘಗಳ ಕಂತು, ಬಾಕಿ ಕಡಿಮೆ ಮಾಡಿಸುವುದರೊಂದಿಗೆ ಈ ವರ್ಷದ ಗುರಿ ಮತ್ತು ಸಾಧನೆಗೆ ಸಹಕಾರ ಇರಲಿ. ಒಕ್ಕೂಟ ಸಭೆ, ಸಂಘಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.

ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಹಾಯ ಹಸ್ತ ಚಾಚಿದೆ. ಇದರ ಸದುಪಯೋಗವನ್ನು ಪಡೆಯಬೇಕು. ಸಂಘವು ಕೃಷಿ ಚಟುವಟಿಕೆಯಿಂದ ಸಣ್ಣ ವ್ಯಾಪಾರ-ವಹಿವಾಟು ಮಾಡುವವರನ್ನು ಕೈ ಹಿಡಿದಿದೆ. ಸಕಾಲದಲ್ಲಿ ಹಣ ಪಾವತಿಸುವುದರ ಜತೆ ಸಂಘದ ಆಶಯಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಸಂತೋಷ, ಎನ್‌ಆರ್‌ಎಲ್‌ಎಂ ಸಮನ್ವಯಾಧಿಕಾರಿ ಬಸವನಗೌಡ, ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ, ಮೇಲ್ವಿಚಾರಕರಾದ ಪ್ರಕಾಶ್, ರುದ್ರೇಶ್, ಉಮೇಶ್, ಕರಿಯಪ್ಪ, ರೇಣುಕಾ, ಖಾಜಾಬನಿ, ಅಭಿಷೇಕ್, ಸಂತೋಷ, ಜ್ಯೋತಿ ಗುಡಿ, ಕಚೇರಿ ಪ್ರಬಂಧಕ ರೇವಣ್ಣ, ಸಹಾಯಕ ಪ್ರಬಂಧಕ ಮಲ್ಲಪ್ಪ, ಕಚೇರಿ ಸಹಾಯಕಿ ಭವಾನಿ, ನಿಂಗರಾಜು, ಟಿಎನ್‌ಒ ಪ್ರಕಾಶ್, ಸೇವಾ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net