

ಕೂಡ್ಲಿಗಿ: ಜಿಲ್ಲಾಧಿಕಾರಿ ಸೂಚನೆಯಂತೆ ತಾಲೂಕಾದ್ಯಂತ ಪ್ರತಿ ಸೋಮವಾರ ಹಾಗೂ ಮಂಗಳವಾರ ಪೌತಿವಾರಸು ಖಾತೆ ಬದಲಾವಣೆ ಅಭಿಯಾನ ಆರಂಭಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆಯುವಂತ ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದ್ದಾರೆ.
ಸಾರ್ವಜನಿಕರು ಪೌತಿ ಹಕ್ಕು ಬದಲಾವಣೆಗೆ ಗ್ರಾಮ ಆಡಳಿತಾಧಿಕಾರಿಯನ್ನು ಭೇಟಿ ಮಾಡಿ, ಪಹಣಿಯಲ್ಲಿ ದಾಖಲಿರುವ, ಪೌತಿಯಾದವರ ವಾರಸುದಾರ ಪಟ್ಟಾದಾರರ ಮರಣ ಪ್ರಮಾಣ ಪತ್ರ, ಇಲ್ಲವಾದಲ್ಲಿ ಕಡ್ಡಾಯವಾಗಿ ಅಫಿಡವಿಟ್ ಸಲ್ಲಿಸಬೇಕು.
ತಾಲೂಕು ಕಚೇರಿಯಲ್ಲಿ ಪಡೆದ ವಂಶವೃಕ್ಷ ಮತ್ತು ನೋಟರಿ ಪ್ರಮಾಣ ಪತ್ರ, ವಾರಸುದಾರರ ಎಲ್ಲ ಸದಸ್ಯರ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ, ಕೈ ಬರಹ ಮತ್ತು ಗಣಕೀಕೃತ ಚಾಲ್ತಿ ಪಹಣಿ, ಮೃತ ಖಾತದಾರರಿಗೆ ಜಮೀನು ಹಕ್ಕು ಹೊಂದಿದ ಬಗ್ಗೆ ಮುಟೇಷನ್ ಪ್ರತಿಯ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪೌತಿವಾರಸು ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.