ಕೂಡ್ಲಿಗಿಯಲ್ಲಿ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

2109 Palayyanakote 108 Twins Birth
ಪಾಲಯ್ಯನಕೋಟೆ ಗ್ರಾಮದ ಹಂಪಮ್ಮ ಸೋಮವಾರ 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Published on

ಕೂಡ್ಲಿಗಿ: ತಾಲೂಕಿನ ಪಾಲಯ್ಯನಕೋಟೆ ಗ್ರಾಮದ ಹಂಪಮ್ಮ ಸೋಮವಾರ ರಾತ್ರಿ ಆಂಬುಲೆನ್ಸ್‌ನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಂಪಮ್ಮಗೆ ರಾತ್ರಿ 11.40 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ 108ಕ್ಕೆ ಕರೆ ಮಾಡಿದ್ದಾರೆ. ನಂತರ ಉಜ್ಜಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ 12 ಗಂಟೆಗೆ ಮೊದಲ ಮಗು, 12.20ಕ್ಕೆ ಎರಡನೇ ಮಗು ಜನಿಸಿದೆ. ಸುಸೂತ್ರವಾಗಿ ಹೆರಿಗೆ ಮಾಡಿಸಿದ ಶುಶ್ರೂಷಕಿ ನಾಗವೇಣಿ ಹಾಗೂ ಚಾಲಕ ಕೊಟೇಶ್, ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ತಾಯಿ ಹಾಗೂ ಮಕ್ಕಳನ್ನು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net