ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ; ಸ್ಥಳದಲ್ಲೇ ತಂದೆ ಸಾವು, ಪ್ರಾಣಾಪಾಯದಿಂದ ಪಾರಾದ ಪುತ

19102020 Kudligi Accident
Published on

ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ-50ರ ಮರಬ ಕ್ರಾಸ್‌ನಲ್ಲಿ ಭಾನುವಾರ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನೆಲದುರ್ಗ ಮೂಲದ ಸಿದ್ದರಾಮ್ ಪವಾರ್ (55) ಮೃತ. ಈತನ ಮಗ, ವಾಹನ ಚಲಾಯಿಸುತ್ತಿದ್ದ ಪ್ರಮೋದ್ ಪವಾರ್ ತೀವ್ರ ಗಾಯಗೊಂಡಿದ್ದು, ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net