ಮಾಸಿಕ ಸಂತೆಯಿಂದ ಆರ್ಥಿಕ ಸಾವಲಂಬನೆ

Untitled design (2)
ಗುಡೇಕೋಟೆಯಲ್ಲಿ ಮಹಿಳೆಯರ ಸ್ವ ಉದ್ಯೋಗಕ್ಕೆ ಮಾಸಿಕ ಸಂತೆ ಮಾರುಕಟ್ಟೆಗೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಚಾಲನೆ ನೀಡಿದರು. ಗ್ರಾಪಂ ಸದಸ್ಯೆ ಸುನೀತಾ,ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕ ವೆಂಕನಾಯ್ಕ, ಮುಖಂಡ ಪೇಂಟ್ ತಿಪ್ಪೇಸ್ವಾಮಿ, ಗ್ರಾಪಂ ಕಾರ್ಯದರ್ಶಿ ರಾಮಚಂದ್ರಪ್ಪ ಇತರರಿದ್ದರು.
Published on

ಕೂಡ್ಲಿಗಿ: ಮಾಸಿಕ ಸಂತೆಯು ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡಲಿದೆ ಎಂದು ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಹೇಳಿದರು.
ತಾಲೂಕಿನ ಗುಡೇಕೋಟೆಯಲ್ಲಿ ಗ್ರಾಪಂ ಹಾಗೂ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಏರ್ಪಡಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ಕರ ಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸಂತೆ ಅನುಕೂಲವಾಗಲಿದೆ ಎಂದರು.

ಮಹಿಳೆಯರು ಸ್ವಯಂ ಉದ್ಯೋಗದೊಂದಿಗೆ ಬದುಕು ರೂಪಿಸಿಕೊಳ್ಳಲಿ

ಗ್ರಾಪಂ ಸದಸ್ಯ ಎಸ್.ಬೊಮ್ಮಣ್ಣ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆಯರು ಸ್ವಯಂ ಉದ್ಯೋಗದೊಂದಿಗೆ ಬದುಕು ರೂಪಿಸಿಕೊಳ್ಳಬೇಕು ಎಂದರು. ಸ್ವ ಸಹಾಯ ಗುಂಪಿನ ಮಹಿಳೆಯರು ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕ ವೆಂಕನಾಯ್ಕ, ಗ್ರಾಪಂ ಸದಸ್ಯೆ ಸುನೀತಾ, ಕಾರ್ಯದರ್ಶಿ ರಾಮಚಂದ್ರಪ್ಪ, ಬಿಲ್ ಕಲೆಕ್ಟರ್ ಎರ‌್ರಿಸ್ವಾಮಿ ಆಚಾರಿ, ಮುಖಂಡ ಪೇಂಟ್ ತಿಪ್ಪೇಸ್ವಾಮಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net