ನೆಮ್ಮದಿಗಾಗಿ ಧ್ಯಾನ ಮಾಡಿ

Kudligi New Year celebration
ಕೂಡ್ಲಿಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ಉದ್ಘಾಟಿಸಿದರು. ವಿಶ್ವವಿದ್ಯಾಲಯದ ಸಂಚಾಲಕಿ ಚಂದ್ರಕಲಾ ಅಕ್ಕ, ಸಂಪನ್ಮೂಲ ವ್ಯಕ್ತಿ ಧನಂಜಯ್, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಗೌಡ್ರು ಕೊಟ್ರೇಶ್ ಟಿ.ಎಚ್.ಎಂ.ಶೇಖರಯ್ಯ ಇತರರಿದ್ದರು.
Published on

ಕೂಡ್ಲಿಗಿ: ಅಧ್ಯಾತ್ಮದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸದಾ ಮಾನಸಿಕ ಒತ್ತಡ ಮತ್ತು ದುಃಖದಲ್ಲಿ ಬದುಕುತ್ತಿರುವ ಜನರು ಅತಿ ಆಸೆಯಿಂದ ದಿಢೀರ್ ಶ್ರೀಮಂತರಾಗಲು ಹಾತೊರೆಯುತ್ತಿದ್ದಾರೆ. ಹಣದಾಸೆಗೆ ಜೂಜಾಟ, ಅಪರಾಧ ಕೃತ್ಯಗಳತ್ತ ಮನಸ್ಸು ಹರಿಬಿಟ್ಟಿದ್ದಾರೆ. ಇದರಿಂದ ವೈಯಕ್ತಿಕ ಹಾಗೂ ಕುಟುಂಬದ ಸ್ವಾಸ್ಥ್ಯಹಾಳು ಮಾಡಿಕೊಳ್ಳುತ್ತಿದ್ದಾರೆ. ಕೌಶಲಗಳನ್ನು ಅಳವಡಿಸಿಕೊಂಡು ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸಲು ಆಧ್ಯಾತ್ಮಿಕ ಸ್ಥಳದಲ್ಲಿ ಧ್ಯಾನ ಮಾಡಬೇಕು ಎಂದರು.

ಮೌಂಟ್ ಅಬು ಮೂಲದ ಸಂಪನ್ಮೂಲ ವ್ಯಕ್ತಿ ಧನಂಜಯ್, ಈಶ್ವರಿಯ ವಿಶ್ವವಿದ್ಯಾಲಯ ಸಂಚಾಲಕರಾದ ಶಶಿಕಲಾ, ಚಂದ್ರಕಲಾ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಸಪಪೂ ಕಾಲೇಜಿನ ಪ್ರಾಚಾರ್ಯೆ ಡಾ.ಟಿ.ಕೊತ್ಲಮ್ಮ, ಮುಖಂಡರಾದ ಚಿದಾನಂದ ಗೌಡ್ರು, ಗೌಡ್ರು ಕೊಟ್ರೇಶ್, ಟಿ.ಎಚ್.ಎಂ.ಶೇಖರಯ್ಯ, ಸುರೇಶ, ನಾಗರಾಜ, ದೊಡ್ಡಪ್ಪ, ಸಿರಿಯಣ್ಣ, ಗೋಪಾಲಣ್ಣ, ಡಿ. ನಾಗರಾಜ, ಬಿ.ಎಸ್. ಆನಂದ ಬಾಬು, ಹನುಮಂತಪ್ಪ, ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net