ಕಾರ್ಮಿಕರಿಗೆ ಬಡ್ಡಿರಹಿತ ಸಾಲ ಕೊಡಿ

230922 Kudligi Protest by state building and other construction federation workers
ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಡ್ಡಿರಹಿತ ಸಾಲ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
Published on

ಕೂಡ್ಲಿಗಿ: 15 ವರ್ಷಗಳಿಂದ ನಿರಂತರವಾಗಿ ಕಲ್ಯಾಣ ಮಂಡಳಿ ಸದಸ್ಯರಾಗಿರುವ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅರ್ಜಿ ಹಾಕಿರುವ ಕಟ್ಟಡ ಕಾರ್ಮಿಕರಿಗೆ ಬಡ್ಡಿರಹಿತ ಸಾಲ ಕೊಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಫೆಡರೇಷನ್ ಪ್ರತಿಭಟನೆ ನಡೆಸಿತು.

ಪೆಡರೇಷನ್ ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಕೊಳಚೆ ನಿರ್ಮೂಲನ ಮಂಡಳಿ ಸೇರಿ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವುದನ್ನು ಕೂಡಲೇ ಕೈಬಿಡಬೇಕು. ನೋಂದಣಿಯಾದ ನೈಜ ಕಟ್ಟಡ ಕಾರ್ಮಿಕ ಹೆಸರುಗಳನ್ನು ಉಳಿಸಿಕೊಂಡು ಇತರೆ ಸೌಲಭ್ಯಗಳನ್ನು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಈಗಾಗಲೇ ಕೊಳಚೆ ನಿರ್ಮೂಲನ ಮಂಡಳಿಗೆ ಪಾವತಿಸಿರುವ 76 ಕೋಟಿ ರೂ. ಕೂಡಲೇ ಮಂಡಳಿ ಖಾತೆಗೆ ವಾಪಸ್ಸು ಪಡೆಯಬೇಕು.

ಕಟ್ಟಣ ಕಾರ್ಮಿಕರ ಫಡೆರೇಷನ್‌ನ ಪ್ರಮುಖರದ ಕರಿಯಣ್ಣ, ಶ್ರೀಧರಾಚಾರಿ, ಬಸವರಾಜ, ಓಬಯ್ಯ, ಪರುಶುರಾಮ, ರಾಮಪ್ಪ, ಮೂಗಣ್ಣ, ಕೋಟ್ರೇಶ್, ಬಸಣ್ಣ, ಶಿವಮೂರ್ತಿ ಆಚಾರಿ, ಬೋರಯ್ಯ, ಬಾಲಚಂದ್ರ, ಪಾರ್ವತಮ್ಮ, ಕೆಂಪಾಲಮ್ಮ, ರತ್ನಮ್ಮ, ಹುಲೆಪ್ಪ, ಮರುಸಿದ್ದಾಚಾರಿ, ನಾಗೇಶ್, ನಬೀಸಾಬ್, ಮಾಬುಸಾಬ್, ಬಾಲಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net