ಕೈವಲ್ಯಾಪುರದಲ್ಲಿ ಅನಂತಪದ್ಮನಾಭ ಸ್ವಾಮಿ ವ್ರತ

KUDLGI Ananta Vrata
ಕೈವಲ್ಯಾಪುರ ಗ್ರಾಮದಲ್ಲಿ ಗುರುವಾರ ಶ್ರೀ ಅನಂತಪದ್ಮನಾಭ ಸ್ವಾಮಿಯ ವ್ರತ ಆಚರಣೆ ಮಾಡಲಾಯಿತು.
Published on

ಕೂಡ್ಲಿಗಿ: ಅನಂತ ಹುಣ್ಣಿಮೆಯ ಅಂಗವಾಗಿ ಕೈವಲ್ಯಾಪುರ ಗ್ರಾಮದ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಗುರುವಾರ ಅನಂತಪದ್ಮನಾಭ ವ್ರತ ಆಚರಿಸಲಾಯಿತು.

ಬೆಳಗ್ಗೆ ಹಿರಿಯ ಪುರೋಹಿತರಾದ ಅನಂತಮೂರ್ತಿ, ಜಿ.ಪಿ.ಗಿರೀಶ, ಜಿ.ಪಿ.ರಂಗನಾಥ ನೇತೃತ್ವದಲ್ಲಿ ಪಾರಾಯಣ, ಪಂಚಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಿತು. ನಂತರ ತೀರ್ಥ, ಪ್ರಸಾದ, ದಾರ ವಿತರಣೆ ಕಾರ್ಯ ಕೈಗೊಳ್ಳಲಾಯಿತು.

ಹುಣ್ಣಿಮೆ ನಿಮಿತ್ತ ಅನಂತಪದ್ಮನಾಭಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ವಿಷ್ಣು ಸಹಸ್ರನಾಮವಳಿ, ಸ್ವಾಮಿಯ ವ್ರತ ಮತ್ತು ಕಥೆ ಹಾಗೂ ಕೀರ್ತನೆ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಜೆ. ಹನುಮಂತಪ್ಪ, ಬಂಡ್ರಿ ವಿನಾಯಕ ಸೇರಿದಂತೆ ಕೂಡ್ಲಿಗಿ, ಶಿವಪುರ, ಕೈವಲ್ಯಾಪುರ, ಹಿರೇಹೆಗ್ಡಾಳ್, ಹಗರಿಬೊಮ್ಮನಹಳ್ಳಿಯ ಭಕ್ತರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net