ಕೂಡ್ಲಿಗಿ ವಿಸ್ಮಯದಲ್ಲಿ ತಾಯಿ ವೈಶಾಲ್ಯತೆ

ಕೂಡ್ಲಿಗಿಯ ಜ್ಞಾನಭಾರತಿ ಬಿ.ಇಡಿ ಕಾಲೇಜಿನಲ್ಲಿ ಭೀಮಣ್ಣ ಗಜಾಪುರ ರಚಿಸಿದ ಕೂಡ್ಲಿಗಿ ವಿಸ್ಮಯ ಕೃತಿಯನ್ನು ಪತ್ರಕರ್ತ ಬಿ.ನಾಗರಾಜ ಬಿಡುಗಡೆಗೊಳಿಸಿದರು. ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಡಿವೈಎಸ್. ಪಿ. ಮಲ್ಲೇಶ ದೊಡ್ಡಮನಿ, ಹಿರಿಯ ರಂಗನಟಿ ಪಿ.ಪದ್ಮಾ, ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಇನ್ನಿತರರಿದ್ದರು.
ಕೂಡ್ಲಿಗಿಯ ಜ್ಞಾನಭಾರತಿ ಬಿ.ಇಡಿ ಕಾಲೇಜಿನಲ್ಲಿ ಭೀಮಣ್ಣ ಗಜಾಪುರ ರಚಿಸಿದ ಕೂಡ್ಲಿಗಿ ವಿಸ್ಮಯ ಕೃತಿಯನ್ನು ಪತ್ರಕರ್ತ ಬಿ.ನಾಗರಾಜ ಬಿಡುಗಡೆಗೊಳಿಸಿದರು. ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಡಿವೈಎಸ್. ಪಿ. ಮಲ್ಲೇಶ ದೊಡ್ಡಮನಿ, ಹಿರಿಯ ರಂಗನಟಿ ಪಿ.ಪದ್ಮಾ, ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಇನ್ನಿತರರಿದ್ದರು.
Published on

ಕೂಡ್ಲಿಗಿ: ಪತ್ರಕರ್ತರು ಜನಸಾಮಾನ್ಯರೊಂದಿಗೆ ಮುಖಾಮುಖಿಯಾಗುವುದರ ಜತೆಗೆ ಸಾಮಾಜಿಕ ಬದ್ಧತೆಯಿಂದ ಇದ್ದಾಗ ಮಾತ್ರ ಮೌಲ್ಯಯುತ ಸುದ್ದಿಗಳ ಬರಲು ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಹೇಳಿದರು.

ಪಟ್ಟಣದ ಜ್ಞಾನಭಾರತಿ ಬಿ.ಇಡಿ ಕಾಲೇಜಿನಲ್ಲಿ ಇತ್ತೀಚೆಗೆ ಗಜಾಪುರದ ಕಾವ್ಯ ಪ್ರಕಾಶನ ಆಯೋಜಿಸಿದ್ದ ಭೀಮಣ್ಣ ಗಜಾಪುರ ರಚಿಸಿದ ‘ಕೂಡ್ಲಿಗಿ ವಿಸ್ಮಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೂಡ್ಲಿಗಿ ವಿಸ್ಮಯ ಕೃತಿಯಲ್ಲಿ ಸಾಮಾನ್ಯರಲ್ಲಿಯೂ ಅಸಮಾನ್ಯತೆ ಕಾಣುವ ಸೂಕ್ಷ್ಮದೃಷ್ಠಿಕೋನ, ತಾಯಿಯ ಹೃದಯದ ವೈಶಾಲ್ಯತೆ ಇದೆ. ಮನುಷ್ಯತೆ ಪ್ರಾಣಿ,ಪಕ್ಷಿಗಳ ಜೀವನ ಕ್ರಮವನ್ನು ನೋಡುವ ಕುತೂಹಲ ಮನಸ್ಸು, ನೊಂದವರಿಗೆ ಧ್ವನಿಯಾಗುವ ದಾವಂತ, ಲೇಖನಿಯಲ್ಲಿಯೇ ಕಣ್ಣೀರು ಒರೆಸಿರುವ ಎಷ್ಟೇಳನ್ನು ಈ ಕೃತಿಯಲ್ಲಿ ಕಾಣಲು ಸಾಧ್ಯ ಎಂದರು. ಡಿವೈಎಸ್. ಪಿ. ಮಲ್ಲೇಶ ದೊಡ್ಡಮನಿ ಮಾತನಾಡಿದರು.

ಪತ್ರಕರ್ತ ಬಿ.ನಾಗರಾಜ ‘ಕೂಡ್ಲಿಗಿ ವಿಸ್ಮಯ’ ಕೃತಿ ಬಿಡುಗಡೆಗೊಳಿಸಿದರು. ಸಾಹಿತಿ ಭೀಮಣ್ಣ ಗಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರಾದ ಕಂಟ್ಲಿ ನೀಲಕಂಠಮೂರ್ತಿ, ಆರ್.ಎಂ.ಬಸವರಾಜ, ಮಂಗಳಮುಖಿ ಸ್ನೇಹಾ, ಕೆ.ವೀರಭದ್ರಪ್ಪ ಅವರನ್ನುಸನ್ಮಾನಿಸಲಾಯಿತು. ಕೊಟ್ಟೂರಿನ ಹಂಸಪ್ರಿಯ ನೃತ್ಯನಿಕೇತನ ಕಲಾಟ್ರಸ್ಟ್ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ಭರತನಾಟ್ಯ ಗಮನಸೆಳೆಯಿತು.

ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಗ್ರಾಪಂ ಸದಸ್ಯ ಅಡ್ಡಂಗಡಿ ರಾಜಣ್ಣ, ಹಿರಿಯ ರಂಗನಟಿ ಪಿ.ಪದ್ಮಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಸಿಐಟಿಯು ಜಿಲ್ಲಾ ಸಂಚಾಲಕ ಗುನ್ನಳ್ಳಿ ರಾಘವೇಂದ್ರ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಗ್ರಾಪಂ ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ, ಪ್ರಮುಖರಾದ ಬಣವಿಕಲ್ಲು ಯರ‌್ರಿಸ್ವಾಮಿ, ಕಾಳಾಪುರ ರಾಜು, ತಳವಾರ ಶಿವರಾಜ, ಬಾರಿಕರ ವೆಂಕಟೇಶಪ್ಪ, ಉಜ್ಜಿನಿ ಭೀಮಣ್ಣ, ಬಾರಿಕರ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net