ಆಸ್ಪತ್ರೆಗೆ ಮೂಲಸೌಲಭ್ಯ ಕಲ್ಪಿಸಲು ಕರವೇ ಗುಡೇಕೋಟೆ ಹೋಬಳಿ ಘಟನೆ ಒತ್ತಾಯ

030123 Gudekote Karave Protest
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ವೈದ್ಯಾಧಿಕಾರಿ ವಿಶ್ವನಾಥಗೆ ಮನವಿ ಸಲ್ಲಿಸಿ,
Published on

ಕೂಡ್ಲಿಗಿ: ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಗುಡೇಕೋಟೆ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ವೈದ್ಯಾಧಿಕಾರಿ ವಿಶ್ವನಾಥಗೆ ಮನವಿ ಸಲ್ಲಿಸಿದರು.

ಆಸ್ಪತ್ರೆ ವ್ಯಾಪ್ತಿಯಲ್ಲಿ 30 ಹಳ್ಳಿಗಳು ಬರುತ್ತವೆ. ಆದರೆ, ಇಲ್ಲಿ ಔಷಧ ಹಾಗೂ ವೈದ್ಯರ ಕೊರತೆ ಇದೆ. ಇದರಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಕೊರತೆ ಇದ್ದು, ಶೌಚಗೃಹ ಮತ್ತು ವಿದ್ಯುತ್ ವ್ಯವಸ್ಥೆ ಸರಿ ಇಲ್ಲ. ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗ್ರಾಪಂ ಸದಸ್ಯರ ಮಹಾ ಒಕ್ಕೂಟ ಅಧ್ಯಕ್ಷ ಕೆ. ಮುರುಳಿರಾಜ, ಸೂರ್ಯನಾರಾಯಣ, ಓಬಣ್ಣ, ಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net