ಅತಿಥಿ ಬೋಧಕರಿಗೆ ಸೇವಾ ಭದ್ರತೆ ಒದಗಿಸಿ

281222 Kudligi Guest Lecture Appeal
ಕೂಡ್ಲಿಗಿಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಕೂಡ್ಲಿಗಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅತಿಥಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವೆಯಲ್ಲಿ ಮುಂದುವರಿಸಿ ಸೇವಾ ಭದ್ರತೆ ಹಾಗೂ ಸಂಭಾವನೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಶಾಸಕ ಎನ್.ವೈ.ಗೋಪಾಲಕೃಷ್ಣಗೆ ಅತಿಥಿ ಬೋಧಕರ ಹೋರಾಟ ಸಮಿತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಹದಿನೈದು ವಷರ್ಗಳಿಂದ 5,50 ಕ್ಕೂ ಹೆಚ್ಚು ಅತಿಥಿ ಬೋಧಕರು ಕಾರ್ಯ ನಿರ್ವಹಿಸುತ್ತಿದ್ದು, ವಯೋಮಿತಿ ಮೀರಿದವರು ಹೆಚ್ಚಾಗಿದ್ದಾರೆ. ಪಠ್ಯಕ್ರಮದಲ್ಲಿ ಪ್ರಾಯೋಗಿಕ ಪಾಠಗಳು ಜಾಸ್ತಿ ಇರುವುದರಿಂದ 6 ಗಂಟೆಗೂ ಹೆಚ್ಚು ಬೋಧನೆ ಮಾಡಬೇಕಿದೆ.ಆದರೆ ನಮಗೆ ನೀಡುವ ಸಂಭಾವನೆ ಕೇವಲ ನಾಲ್ಕು ಗಂಟೆಗಳಿಗೆ ಮಾತ್ರ. ಮಾಸಿಕ 9,600 ರೂ. ಮಾತ್ರ ನೀಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ. ಅಲ್ಲದೆ ಕೆಪಿಎಸ್‌ಸಿ ಯಿಂದ ಕಿರಿಯ ತರಬೇತಿ ಅಧಿಕಾರಿಗಳನ್ನು ಅತಿಥಿ ಭೋದಕರುಗಳ ಸ್ಥಳಕ್ಕೆ ನಿಯೋಜನೆ ಮಾಡುತ್ತಿದ್ದಾರೆ.ಇದರಿಂದ ಶೇ. 60 ಬೋಧಕರು ಕೆಲಸ ಕಳೆದು ಕೊಳ್ಳುವ ಭೀತಿ ಎದುರಾಗಿದೆ. ಈಗ ಕೆಲಸ ಇಲ್ಲದೆ ಹೊರಬಿದ್ದರೆ ಕುಟುಂಬದ ಪರಿಸ್ಥಿತಿ ಏನಾಗುತ್ತದೆ ಎಂದು ಊಹೆಗೂ ನಿಲುಕ್ಕದ್ದಾಗಿದೆ. ಕೆಪಿಎಸ್ಸಿಯಿಂದ ಕಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಿದರೂ 500ಕ್ಕೂ ಹೆಚ್ಚು ಸ್ಥಾನ ಖಾಲಿ ಉಳಿಯುತ್ತವೆ.ಆ ಖಾಲಿ ಸ್ಥಾನಗಳಿಗೆ ಅನುಭವದ ಆಧಾರದ ಮೇಲೆ ಹೊರಗುತ್ತಿಗೆ ರೂಪದಲ್ಲಿ ಅತಿಥಿ ಬೋಧಕರನ್ನು ಪರಿಗಣಿಸಿ ಮುಂದುವರಿಸಬೇಕು. ಬೋಧಕರ ಸಂಭಾವನೆಯನ್ನು ಸಹ ದಿನಕ್ಕೆ ಸಾವಿರ ರೂ. ಹೆಚ್ಚಿಸಲು ಸದನದಲ್ಲಿ ಚರ್ಚಿಸಿ ಮನವೊಲಿಸಿ ನ್ಯಾಯ ದೊರಕಿಸಬೇಕೆಂದು ಮನಿ ಮಾಡಿದರು.

ಶಾಸಕರ ಆಪ್ತ ಕಾರ್ಯದರ್ಶಿ ಬಿ.ಶ್ರೀಕಾಂತ್‌ಗೆ ಮನವಿಸಲ್ಲಿಸಿದರು. ಸರ್ಕಾರಿ ತರಬೇತಿ ಅತಿಥಿ ಬೋಧಕರ ಸಂಘದ ಅಧ್ಯಕ್ಷ ಎ.ಇ.ಬಸವನ ಮೂರ್ತಿ, ಕಾರ್ಯದರ್ಶಿ ದೇವರಾಜ, ಸೋಮಶೇಖರ, ಎಚ್.ಎಂ.ಗಂಗಾಧರಯ್ಯ, ಸುದರ್ಶನ, ಗಿರೀಶ್, ಬಡಿಗೇರ್ ವಿಶ್ವನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net