ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಆಗ್ರಹ: ಕೂಡ್ಲಿಗಿಯಲ್ಲಿ ಸಿಪಿಐನಿಂದ ತಹಸೀಲ್ದಾರ್‌ಗೆ ಮನವಿ

Kudligi CPI Protest
ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಕೆ.ಜಗದೀಶ್‌ಗೆ ಸಿಪಿಐ ತಾಲೂಕು ಘಟಕ ಶುಕ್ರವಾರ ಮನವಿ ಸಲ್ಲಿಸಿತು.
Published on

ಕೂಡ್ಲಿಗಿ: ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿ ಸಿಪಿಐ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಕೆ.ಜಗದೀಶ್‌ಗೆ ಮನವಿ ಸಲ್ಲಿಸಿದರು. ತಾಲೂಕು ಕಾರ್ಯದರ್ಶಿ ಎಚ್.ವೀರಣ್ಣ ಮಾತಾನಾಡಿ, ಕೋವಿಡ್ ಲಾಕ್‌ಡೌನ್‌ನಿಂದ ದೇಶದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಅಗತ್ಯವಸ್ತುಗಳ ಬೆಲೆ ಹೆಚ್ಚಿಸುತ್ತಿರುವುದು ಖಂಡನೀಯವಾಗಿದ್ದ, ದರ ನಿಯಂತ್ರಣಕ್ಕೆ ತರಬೇಕು. ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಭಗತ್ ಸಿಂಗ್ ಎಂಪ್ಲಾಯ್‌ಮೆಂಟ್ ಕಾಯ್ದೆಯನ್ನು ಜಾರಿಗೆ ತಂದು ಅವರ ಭವಿಷ್ಯ ಉಜ್ವಲಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಜೆ.ವೀರೇಶ್, ವಿಠಲ್, ಯು.ಪೆನ್ನಪ್ಪ, ಅನಂತೇಶ್, ಡಿ.ಇಬ್ರಾಹಿಂ, ಹೊನ್ನೂರು ಸ್ವಾಮಿ, ಕೆ.ನಾಸೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net