ವಿದ್ಯುತ್ ಸಮಸ್ಯೆ ಪರಿಹರಿಸಿ

ಕೂಡ್ಲಿಗಿಯ ಜೆಸ್ಕಾಂ ಎಇಇ ಏಕಾಂತ ರೆಡ್ಡಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮನವಿ ಸಲ್ಲಿಸಿತು. ಸಿಐಟಿಯು ತಾಲೂಕು ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ, ಜನವಾದಿ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ, ಪ್ರಮುಖರಾದ ಫಕೀರಮ್ಮ, ಕೆ. ಕರಿಯಣ್ಣ, ಬಿ.ಹೂಲೆಪ್ಪ, ಹೇಮಣ್ಣ, ಅಂಜಿನಪ್ಪ, ಚಂದ್ರಪ್ಪ ಪಾಲ್ಗೊಂಡಿದ್ದರು.

Published on

ಕೂಡ್ಲಿಗಿ: ಪಟ್ಟಣದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪಟ್ಟಣದ ಜೆಸ್ಕಾಂ ಕೂಡ್ಲಿಗಿ ಉಪ ವಿಭಾಗದ ಎಇಇ ಏಕಾಂತ ರೆಡ್ಡಿಗೆ ಮಂಗಳವಾರ ಮನವಿ ಸಲ್ಲಿಸಿತು.

ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕಚೇರಿಗೆ ದೂರವಾಣಿ ಮೂಲಕ ಕೇಳಿದರೆ 10 ನಿಮಿಷದಲ್ಲಿ ಬರುತ್ತದೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಆದರೆ, ಗಂಟೆ ಕಳೆದರೂ ಬರುವುದಿಲ್ಲ. ಪುನಃ ಕರೆ ಮಾಡಿದರೆ ಕಿರಿಯ ಇಂಜಿನಿಯರ್, ಲೈನ್‌ಮ್ಯಾನ್‌ಗೆ ಸಂಪರ್ಕಿಸಿ ಎಂದು ಹೇಳುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿದರೂ ‘ಜೆಇ ಫೋನ್ ಸ್ವೀಕರಿಸುತ್ತಿಲ್ಲ ಎಂದು ದೂರು ನೀಡಿ’ ಎನ್ನುತ್ತಿದ್ದಾರೆ. ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net