ಮಹತ್ವಾಕಾಂಕ್ಷಿ ಯೋಜನೆಗಳೇ ಬಿಜೆಪಿ ಗೆಲುವಿಗೆ ದಿಕ್ಸೂಚಿ

LOKESH-NAIYK
ಲೋಕೇಶ್ ವಿ. ನಾಯಕ
Published on

ಕೂಡ್ಲಿಗಿ: ಡಬಲ್ ಇಂಜಿನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳೇ ಬಿಜೆಪಿ ಗೆಲುವಿಗೆ ದಿಕ್ಸೂಚಿಯಾಗಲಿವೆ ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಆಲೂರಿನಲ್ಲಿ ಬುಧವಾರ ಬಿಜೆಪಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತಾನಾಡಿದರು. ಕಳೆದ ಐದು ವರ್ಷದಲ್ಲಿ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಬಹು ವಷರ್ಗಳ ಬೇಡಿಕೆಯಾಗಿದ್ದ ನೀರಾವರಿ ಯೋಜನೆಗೆ 800 ಕೋಟಿ ರೂ. ಅನುದಾನ ನೀಡಿದರು.

ಇದರಿಂದಾಗಿ ತಾಲೂಕಿನ 74 ಕೆರೆಗಳಿಗೆ ಜೀವಜಲ ದೊರಕಿದೆ. ಪಟ್ಟಣದ ಉಪ ಮಾರುಕಟ್ಟೆ ಮೇಲ್ದರ್ಜೆಗೆ ಏರಿಸಿ ಪೂರ್ಣ ಪ್ರಮಾಣದ ಮಾರುಕಟ್ಟೆ ಮಾಡಿ ಈ ಭಾಗದ ರೈತರಿಗೆ ಫಸಲು ಮಾರಲು ಎಪಿಎಂಸಿ ಕಲ್ಪಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕಿದೆ ಎಂದರು.

ಮುರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನದ ಜತೆ ಅವಶ್ಯ ಅನುದಾನ ನೀಡಿ ಈ ಭಾಗದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿದೆ.

ವಸತಿ ಹೀನರಿಗೆ 2,300 ಕ್ಕೂ ಅಧಿಕ ಮನೆ ನೀಡಿದೆ. ಹೀಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವ ಬಿಜೆಪಿ ಬೆಂಬಲಿಸುವ ಕಾರ್ಯ ಮತದಾರರು ಮಾಡಬೇಕು. ಮತ್ತೊಮ್ಮೆ ಪಕ್ಷದ ಅಭ್ಯರ್ಥಿ ಲೋಕೇಶ್ ವಿ. ನಾಯಕ ಅವರನ್ನು ಬಹುಮತದೊಂದಿಗೆ ಆಯ್ಕೆ ಮಾಡುವಂತೆ ಕೋರಿದರು.

ಮಾಜಿ ಸಚಿವ ಬಿ.ಶ್ರೀರಾಮುಲು, ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಯ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.

ಪಕ್ಷದ ಮುಖಂಡರಾದ ಎಸ್.ಪಿ.ಪ್ರಕಾಶ್, ಕೆ.ಎಚ್. ವೀರನಗೌಡ, ಬಿ.ಭೀಮೇಶ್, ಮಾಜಿ ಜಿಪಂ ಸದಸ್ಯ ಎಚ್.ರೇವಣ್ಣ, ಮಾಜಿ ಜಿಪಂ ಅಧ್ಯಕ್ಷ ಜಿ.ಉಮೇಶ್, ಬಣವಿಕಲ್ಲು ನಾಗರಾಜ, ನಾರಾಯಣಿ, ಆಲೂರು ಮಲ್ಲಿಕಾರ್ಜುನ, ಪಾಪನಾಯಕ, ಗ್ರಾಪಂ ಸದಸ್ಯ ಮೂರ್ತಿ, ಬೋರಣ್ಣ, ಇಮಾಮ್, ಹೀರಾಸಾಬ್, ಪವಿತ್ರಾ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net