ದಾವಣಗೆರೆ ಡಿಪೋ ಬಸ್ ಜಪ್ತಿ

ಮೃತ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೂಡ್ಲಿಗಿಯಲ್ಲಿ ದಾವಣಗೆರೆ ಡಿಪೋ ಬಸ್ ಜಪ್ತಿ ಮಾಡಿರುವುದು. ಅಮೀನ ವಿ.ಚೆನ್ನಪ್ಪ, ವಕೀಲರಾದ ಜಿ.ಸೀತಾರಾಮ, ಸಲೀಂ, ಪರಮೇಶ ಇದ್ದರು.
ಮೃತ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೂಡ್ಲಿಗಿಯಲ್ಲಿ ದಾವಣಗೆರೆ ಡಿಪೋ ಬಸ್ ಜಪ್ತಿ ಮಾಡಿರುವುದು. ಅಮೀನ ವಿ.ಚೆನ್ನಪ್ಪ, ವಕೀಲರಾದ ಜಿ.ಸೀತಾರಾಮ, ಸಲೀಂ, ಪರಮೇಶ ಇದ್ದರು.
Published on

ಕೂಡ್ಲಿಗಿ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದ ಮೇರೆಗೆ ದಾವಣಗೆರೆ ಡಿಪೋ ಬಸ್‌ನ್ನು ಮಂಗಳವಾರ ಜಪ್ತಿ ಮಾಡಲಾಗಿದೆ.

ಹರಪನಹಳ್ಳಿ ತಾಲೂಕಿನ ಹರಿಯಮ್ಮನಹಳ್ಳಿ ಗ್ರಾಮದ ಪ್ರಶಾಂತ್ (22) 2021 ನ.5 ರಂದು ಹರಪನಹಳ್ಳಿಯಿಂದ ಕೂಡ್ಲಿಗಿಗೆ ಬೈಕ್‌ನಲ್ಲಿ ಬರುವಾಗ ಕೊಟ್ಟೂರು ಸಮೀಪದ ಮಲ್ಲನಾಯಕನಹಳ್ಳಿ ಬಳಿ ದಾವಣಗೆರೆ ಡಿಪೋ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರ ಪ್ರಶಾಂತ್ ಸ್ಥಳದಲ್ಲೇ ಮೃತ ಪಟ್ಟಿದ್ದರು.

ಪರಿಹಾರ ಕೋರಿ ಮೃತನ ತಂದೆ ಹನುಮಂತಪ್ಪ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಮೃತನ ಪರ ವಕೀಲರಾದ ಜಿ.ಸೀತರಾಮ ಹಾಗೂ ಸಲೀಂ ವಾದ ಮಂಡಿಸಿದ್ದರು. ನ್ಯಾಯಾಲಯ 23 ಲಕ್ಷ ರೂ. ಪರಿಹಾರ ನೀಡುವಂತೆ 2024 ಏ.10 ರಂದು ಆದೇಶಿಸಿತ್ತು.

ಕೆಎಸ್‌ಆರ್‌ಟಿಸಿ ಸಂಸ್ಥೆ ಪರಿಹಾರದ ಮೊತ್ತ ನೀಡಲು ವಿಳಂಬ ಮಾಡಿದ ಕಾರಣ, ಬಸ್ ಜಪ್ತಿ ಮಾಡುವಂತೆ ವಕೀಲರು ಅರ್ಜಿ ಸಲ್ಲಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಯೋಗೇಶ್ ಜಪ್ತಿ ಆದೇಶ ಹೊರಡಿಸಿದ್ದು, ಕೋರ್ಟ್ ಅಮೀನರಾದ ವಿ.ಚೆನ್ನಪ್ಪ, ಪರಮೇಶ ಮಂಗಳವಾರ ಬಸ್ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net