ಕೋವಿಡ್‌ನಿಂದ ಮುಕ್ತರಾಗಲು ಪ್ರತಿಯೊಬ್ಬರೂ ಮೂರನೇ ಡೋಸ್ ಪಡೆಯಲಿ

160722 Kudligi Covid 3rd Dose Programmee
ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಶನಿವಾರ ಹಮ್ಮಿಕೊಂಡ ಕೋವಿಡ್ ಮೂರನೆಯ ಲಸಿಕಾ ಕಾರ್ಯಕ್ರಮಕ್ಕೆ ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು.
Published on

ಕೂಡ್ಲಿಗಿ: ಕೋವಿಡ್‌ನಿಂದ ಮುಕ್ತವಾಗಬೇಕಾದರೆ ಪ್ರತಿಯೊಬ್ಬರೂ ಮೂರನೇ ಡೋಸ್ ಪಡೆಯಬೇಕು ಎಂದು ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೋವಿಡ್ ಮೂರನೇ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎರಡು ಅಲೆಗಳಲ್ಲಿ ಅನೇಕರು ಜೀವ ಬಿಟ್ಟಿದ್ದು ನಮ್ಮ ಎದುರಿಗಿದೆ. ಆದರೂ ಅನೇಕರು ಲಸಿಕೆ ಪಡೆಯಲು ಮುಂದು ಬರುತ್ತಿಲ್ಲ.ಲಸಿಕೆ ಪಡೆಯದೇ ಅನೇಕರು ಸತ್ತಿರುವ ಕುಟುಂಬಗಳು ತೀವ್ರ ನೋವು ಪಟ್ಟಿವೆ. ಪರಿಸ್ಥಿತಿ ಕೈ ಮೀರುವ ಮೊದಲೇ ಜಾಗೃತರಾಗಿ ಎಲ್ಲರೂ ಲಸಿಕೆ ಪಡೆಯಬೇಕು. ಇದರಿಂದ ಜೀವನ ಜತೆಗೆ ನಿಮ್ಮ ನಂಬಿದ ಕುಟುಂಬಗಳು ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

ಪಪಂ ಸದಸ್ಯ ಕೆ.ಎಚ್.ಎಂ.ಸಚಿನ್ ಕುಮಾರ್, ಮುಖಂಡರಾದ ಬಿ.ಭೀಮೇಶ್, ಎಸ್.ದುರುಗೇಶ್, ಹಿರಿಯ ಅರೋಗ್ಯಧಿಕಾರಿ ಜಗದೀಶ್ ನಾಯ್ಕ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ, ಹಿರಿಯ ಮಹಿಳಾ ಆರೋಗ್ಯಧಿಕಾರಿ ಸುನೀತ, ಭವ್ಯಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net