

ಕೂಡ್ಲಿಗಿ: ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ತಿಳಿಸಿದರು.
ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಪ್ರತಿ ಮಗುವಿನಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದು ಶಿಕ್ಷಕರಿಗೆ ಮಾತ್ರ ತಿಳಿದಿರುತ್ತದೆ. ಅಂಥ ಮಕ್ಕಳನ್ನು ಗುರುತಿಸಿ ಇಂಥ ವೇದಿಕೆಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದಲ್ಲಿ ರಾಜ್ಯಮಟ್ಟದಲ್ಲೂ ಪ್ರತಿಭೆ ಅನಾವರಣಗೊಳ್ಳುತ್ತದೆ. ಇದರೊಂದಿಗೆ ಶಾರೀರಿಕ, ಬೌದ್ಧಿಕವಾಗಿ ಮಕ್ಕಳು ಬೆಳವಣಿಗೆ ಹೊಂದುತ್ತಾರೆ ಎಂದರು. 11 ಶಾಲೆ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಬಿಇಒ ಪದ್ಮನಾಭ ಕರಣಂ, ಬಿಸಿಯೂಟ ಯೋಜನಾಧಿಕಾರಿ ಆಂಜನೇಯ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್, ಬಿಆರ್‌ಪಿಗಳಾದ ರವೀಂದ್ರ, ನಾಗರಾಜ, ಕೆ.ಜಿನಾಬೀ, ಮಂಜುನಾಥ, ನಾಗವೇಣಿ, ಬಿ.ರೆಹಮಾನ್ ಇತರರಿದ್ದರು.