

ಕೂಡ್ಲಿಗಿ: ಬಳ್ಳಾರಿ ಬಿಮ್ಸ್‌ನಲ್ಲಿ ಮೃತಪಟ್ಟಿದ್ದ ಪಟ್ಟಣದ ಆಜಾದ್ ನಗರದ ಬಾಣಂತಿ ಕುಟುಂಬಕ್ಕೆ ಸರ್ಕಾರ ನೀಡಿದ್ದ ಐದು ಲಕ್ಷ ರೂ. ಪರಿಹಾರದ ಚೆಕ್ ಅನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸುಮಯ್ಯ ಬಾನು ಪತಿ ಅಬ್ದುಲ್ ರೆಹಮಾನ್‌ಗೆ ಶನಿವಾರ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ, ಪರಿಹಾರ ಹಣವನ್ನು ಮಕ್ಕಳ ಭವಿಷ್ಯಕ್ಕೆ ಬಳಕೆ ಮಾಡಬೇಕು. ಮಗಳು ಹಾಗೂ ಮಗನ ಹೆಸರಿನಲ್ಲಿ ತಲಾ ಎರಡು ಲಕ್ಷ ರೂ.ಗಳನ್ನು ನಿಶ್ಚಿತ ಠೇವಣಿ ಇಡಬೇಕು. ಉಳಿದ ಒಂದು ಲಕ್ಷ ರೂ.ಗಳನ್ನು ಮಕ್ಕಳ ಪೋಷಣೆಗೆ ಬಳಸಬೇಕು ಎಂದು ಸಲಹೆ ನೀಡಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ವಕೀಲ ಎಲ್.ಎಸ್. ಬಷೀರ್ ಅಹಮದ್, ಪ್ರಮುಖರಾದ ಮಾದೇಹಳ್ಳಿ ನಜೀರ್, ಬ್ಯಾಂಕ್ ಶಫಿವುಲ್ಲಾ, ಅಬ್ದುಲ್ ಸಾಬ್, ಮುನ್ನಾ, ಜಿಲಾನ್, ಶಬ್ಬೀರ್, ಮಹಮದ್ ಇಲಿಯಾಸ್, ಮೃತಳ ಅತ್ತೆ ಖೈರುನ್ನಿಸಾ, ಅಜ್ಜಿ ಹೊನ್ನೂರಬೀ ಇದ್ದರು.